ಬಜೆಟ್‌ನಲ್ಲಿ ರೈಲ್ವೆಗೆ ಹೆಚ್ಚಿನ ಆದ್ಯತೆ: ಅಹ್ಮದ್ ಬಾವ ಪಡೀಲ್
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ 9 ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ರೈಲ್ವೆ ಜಾಲವನ್ನು ರಾಜ್ಯದ ಎಲ್ಲಾ ಭಾಗಗಳಿಗೂ ವಿಸ್ತರಿಸಿ ಪ್ರಾದೇಶಿಕ ಅಸಮತೋಲನವನ್ನು ನೀಗಿಸಿದ್ದಾರೆ ಎಂದು ದಕ್ಷಿಣ ವಲಯ ರೈಲ್ವೆ ಡಿಆರ್‌ಯುಸಿಸಿ ಸದಸ್ಯ ಹಾಗೂ ಮಂಗಳೂರು ಎಪಿಎಂಸಿ ಮಾಜಿ ಸದಸ್ಯ ಎಂ.ಅಹ್ಮದ್ ಬಾವ ಪಡೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
9 ಸಾವಿರ ಕೋ.ರೂ.ನಲ್ಲಿ 1110 ಕಿ.ಮೀ. ಉದ್ದದ 9 ರೈಲ್ವೆ ಯೋಜನಾ ಕಾರ್ಯಕ್ರಮಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ. ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕೆ ಕ್ರಮ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಸಂಬಂಧಿಸಿದಂತೆ ಹಿಂದಿನ ಸರಕಾರ ತೆಗೆದುಕೊಂಡು ನಿಯಮಗಳನ್ನು ಹಿಂಪಡೆಯದೆ ಯಥಾಸ್ಥಿತಿ ಕಾಪಾಡಿದೆ. ಇದರಿಂದ ರೈತರ, ವ್ಯಾಪಾರಿಗಳ ಹಾದಿಯನ್ನು ಸುಗಮಗೊಳಿಸಿದೆ ಎಂದು ಅಹ್ಮದ್ ಬಾವ ಪಡೀಲ್ ಪ್ರತಿಕ್ರಿಯಿಸಿದ್ದಾರೆ.
Next Story