ಕುಂದಾಪುರ: ಅಕ್ರಮ ಜಾನುವಾರು ಸಾಗಾಟ ಆರೋಪ; ಇಬ್ಬರ ಬಂಧನ
ಕುಂದಾಪುರ, ಜೂ.24: ಅಕ್ರಮವಾಗಿ ಜಾನುವಾರುಗಳನ್ನು ಗೂಡ್ಸ್ ವಾಹನ ದಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಹಾಲಾಡಿ ಗ್ರಾಮದ ಕುದ್ರುಬೆಟ್ಟು ಎಂಬಲ್ಲಿ ಜೂ.24ರಂದು ಬಂಧಿಸಿದ್ದಾರೆ.
ಕುಂದಾಪುರ ಜಪ್ತಿ ಕರಿಕಲ್ಕಟ್ಟೆಯ ಚಂದ್ರ ಶೆಟ್ಟಿ (55), ಹಳ್ಳಾಡಿ ಗುಡ್ಡೆಯಂಗಡಿ ನಿವಾಸಿ ಅಣ್ಣಪ್ಪ(65) ಬಂಧಿತ ಆರೋಪಿಗಳು.
ಇವರು ಗೂಡ್ಸ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮೂರು ಕರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ವಧೆ ಮಾಡಲು ಕುಚ್ಚಾಳ ಕಡೆಯಿಂದ ಕುಂದಾಪುರ ಕಡೆಗೆ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ದೊರೆತ ಖಚಿತ ವರ್ತಮಾನದಂತೆ ಶಂಕರ ನಾರಾಯಣ ಎಸ್ಸೈ ನಾಸೀರ್ ಹಾಗೂ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾ ಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story