ಉಡುಪಿ, ಜು.15: ಮೆಸ್ಕಾಂ ಕಾರ್ಕಳ ಉಪವಿಭಾಗ ಕಚೇರಿಯಲ್ಲಿ ಜುಲೈ 18ರಂದು ಬೆಳಗ್ಗೆ 10:30ಕ್ಕೆ ಜನಸಂಪರ್ಕ ಸಭೆ ನಡೆಯಲಿದೆ. ಹಿರಿಯ ಮೆಸ್ಕಾಂನ ಅಧಿಕಾರಿಗಳು ಇದರಲ್ಲಿ ಭಾಗವಹಿಸುವರು. ಗ್ರಾಹಕರು ದೂರವಾಣಿ ಸಂಖ್ಯೆ: 08258-230648ಅನ್ನು ಸಂಪರ್ಕಿಸಿ ತಮ್ಮ ಅಹವಾಲು ಗಳನ್ನು ಸಲ್ಲಿಸಬಹುದು ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.