ಜು.5: ಚಿಲಿಂಬಿಯಲ್ಲಿ ‘ಲ್ಯಾಂಡ್ ಟ್ರೇಡ್ಸ್ ಪ್ರಿಸ್ಟಿನ್’ಗೆ ಶಿಲಾನ್ಯಾಸ
ಮಂಗಳೂರು,ಜು.3: ನಗರದ ಪ್ರತಿಷ್ಠಿತ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವೆಲಪರ್ಸ್ ಸಂಸ್ಥೆಯಿಂದ ಚಿಲಿಂಬಿಯಲ್ಲಿ ನಿರ್ಮಾಣಗೊಳ್ಳಲಿರುವ ಅತ್ಯಂತ ಮಹತ್ವಾಕಾಂಕ್ಷೆಯ ‘ಲ್ಯಾಂಡ್ ಟ್ರೇಡ್ಸ್ ಪ್ರಿಸ್ಟಿನ್’ ವಸತಿ ಮತ್ತು ವಾಣಿಜ್ಯ ಸಮುಚ್ಚಯಕ್ಕೆ ಜು.5ರಂದು ಬೆಳಗ್ಗೆ 9:30ಕ್ಕೆ ಶಿಲಾನ್ಯಾಸ ನಡೆಯಲಿದೆ.
ಎ.ಜೆ. ಸಮೂಹದ ಅಧ್ಯಕ್ಷ ಡಾ. ಎ.ಜೆ.ಶೆಟ್ಟಿ ಅವರು ಲ್ಯಾಂಡ್ ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಮತ್ತು ಯೋಜನೆಯ ಸಹಭಾಗಿದಾರ ಚಂದ್ರಶೇಖರನ್ ನಾಯರ್‌ರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸುವರು.
ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಎಂ.ಆರ್.ಜಿ. ಗ್ರೂಪ್‌ನ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ದೇರೆಬೈಲ್-ದಕ್ಷಿಣ ವಾರ್ಡ್‌ನ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ ಮುಖ್ಯ ಅತಿಥಿಗಳಾಗಿರುವರು. ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆ ವಹಿಸುವರು.
1.3 ಎಕರೆ ಜಮೀನಿನಲ್ಲಿ 37 ಅಂತಸ್ತುಗಳ ಈ ಗಗನಚುಂಬಿ ಸಮುಚ್ಚಯವು 3 ಬಿಎಚ್‌ಕೆ ಮತ್ತು 4 ಬಿಎಚ್‌ಕೆಗಳ 102 ಸೂಪರ್ ಲಕ್ಸುರಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಲಿದೆ. ನಗರದ ಅತೀ ಪ್ರಮುಖವಾದ ಲೇಡಿಹಿಲ್-ಚಿಲಿಂಬಿ ಪ್ರದೇಶದಲ್ಲಿ ವಾಸ್ತು ವೈಭವದ ಸಮುಚ್ಚಯವಾಗಿ ಲ್ಯಾಂಡ್‌ಟ್ರೇಡ್ಸ್ ಪ್ರಿಸ್ಟಿನ್ ಮೂಡಿ ಬರಲಿದೆ.
ಪ್ರಿಸ್ಟಿನ್ ಯೋಜನೆಯು ವಸತಿ ಮತ್ತು ವಾಣಿಜ್ಯ ಸಮುಚ್ಚಯವು ಪ್ರತ್ಯೇಕವಾದ ಪ್ರವೇಶ ಸೌಲಭ್ಯವನ್ನು ಹೊಂದಿದ್ದು, ಗರಿಷ್ಠ ಖಾಸಗಿತನ ಮತ್ತು ಭದ್ರತಾ ಸೌಲಭ್ಯವಿರಲಿದೆ. ವಾಣಿಜ್ಯ ಪ್ರದೇಶವು ಅತೀ ಪ್ರಮುಖ ವ್ಯವಹಾರ ಸಂಸ್ಥೆಗಳಿಗೆ ಸೂಕ್ತವಾಗಿರುತ್ತದೆ. ವಸತಿ ಸಮುಚ್ಚಯವು 12ನೇ ಅಂತಸ್ತಿನಿಂದ ಆರಂಭವಾಗಲಿದ್ದು, ತಾಜಾ ಗಾಳಿ ಮತ್ತು ಧಾರಾಳ ಬೆಳಕನ್ನು ಎಲ್ಲಾ ಅಂತಸ್ತುಗಳಲ್ಲಿ ಹೊಂದಿರುತ್ತದೆ. ಪ್ರತೀ ಅಪಾರ್ಟ್‌ಮೆಂಟ್ ಇನ್ನೊಂದು ಅಪಾರ್ಟ್‌ಮೆಂಟಿನ ಸಂಪರ್ಕ ಹೊಂದದೆ ಸಂಪೂರ್ಣ ಸ್ವತಂತ್ರವಾಗಿರುತ್ತದೆ. ಇಂತಹ ಪರಿಕಲ್ಪನೆಯು ಮಂಗಳೂರಲ್ಲೇ ಪ್ರಥಮವಾಗಿರುತ್ತದೆ.
ನೆಲ ಮತ್ತು 4 ಅಂತಸ್ತುಗಳು ವಾಣಿಜ್ಯ ಪ್ರದೇಶವಾಗಲಿದ್ದು, ಪ್ರತ್ಯೇಕವಾದ ಬೇಸ್‌ಮೆಂಟ್ ಪಾರ್ಕಿಂಗ್ ಹೊಂದಿರುತ್ತದೆ. 12 ರಿಂದ 37 ಅಂತಸ್ತುಗಳು 102 ಅಪಾರ್ಟ್‌ಮೆಂಟ್‌ಗಳನ್ನು, 5ರಿಂದ 10 ನೇ ಅಂತಸ್ತುಗಳು ರೆಸಿಡೆನ್ಸಿಯಲ್ ಪಾರ್ಕಿಂಗ್ ಹೊಂದಿರುತ್ತದೆ. 5 ನೇ ಅಂತಸ್ತಿನಲ್ಲಿ ಸಿಟರ್ಸ್ ಲಾಬಿ, 11 ನೇ ಅಂತಸ್ತಿನಲ್ಲಿ ಕ್ಲಬ್‌ಹೌಸ್ ಇರಲಿದೆ.
37 ಅಂತಸ್ತುಗಳ ಈ ಗಗನಚುಂಬಿ ವಸತಿ ಸಮುಚ್ಚಯವು ಈಜುಕೊಳ, ಸೌನ, ಜಕುಜಿ, ಸ್ಟೀಮ್, ಬ್ಯಾಡ್ಮಿಂಟನ್-ಬಾಸ್ಕೆಟ್ ಬಾಲ್ ಕೋರ್ಟ್, ಮಿನಿಥಿಯೇಟರ್, ಜಾಗಿಂಗ್ ಟ್ರ್ಯಾಕ್, ಯೋಗ-ಧ್ಯಾನ ಕೊಠಡಿ, ಒಳಾಂಗಣ ಸಭಾಂಗಣ, ಜಿಮ್ನೇಶಿಯಂ, 4 ಹೈಸ್ಪೀಡ್ ಲಿಫ್ಟ್, ಮಕ್ಕಳ ಆಟದ ಏರಿಯಾ, ಪಾರ್ಟಿ ಲಾನ್‌ಗಳ ವೈಶಿಷ್ಟ್ಯಗಳನ್ನು ನಿವಾಸಿಗಳಿಗೆ ಅರ್ಪಿಸಲಿದೆ.
ನಿರಂತರ ನೀರು ಪೂರೈಕೆ, ಸೌರ ವಿದ್ಯುತ್ ವ್ಯಸ್ಥೆಯಿಂದ ಪರಿಸರ ಸಹ್ಯ ಜೀವನ ಶೈಲಿ, ಮಳೆ ನೀರು ಇಂಗಿಸುವಿಕೆ, ತ್ಯಾಜ್ಯ ಸಂಸ್ಕರಣ ಘಟಕ, 24X7 ಸಿಸಿ ಟಿವಿ ಮೇಲ್ವಿಚಾರಣೆ ಇರಲಿದೆ. ವಾಣಿಜ್ಯ ಸಂಕೀರ್ಣವು ಪ್ರತ್ಯೇಕ 3 ಲಿಫ್ಟ್‌ಗಳನ್ನು ಹೊಂದಿದ್ದು, ನೆಲ ಮತ್ತು ತಳ ಮಹಡಿಯಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ ಎಂದು ಲ್ಯಾಂಡ್‌ಟ್ರೇಡ್ಸ್ ಪ್ರವರ್ತಕ ಶ್ರೀನಾಥ್ ಹೆಬ್ಬಾರ್ ತಿಳಿಸಿದ್ದಾರೆ.