ಕೋಡಿ ಬ್ಯಾರೀಸ್ ಸೀಸೈಡ್ ಸ್ಕೂಲ್‌ನ ಶಿಕ್ಷಕ-ರಕ್ಷಕ ಸಭೆ
ಕುಂದಾಪುರ: ಕೋಡಿ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ನಲ್ಲಿ ಶೈಕ್ಷಣಿಕ ವರ್ಷ 2023-24 ರ ಪ್ರಥಮ ಶಿಕ್ಷಕ ರಕ್ಷಕ ಸಭೆಯನ್ನು ಜು.1ರಂದು ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ಮಕ್ಕಳ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ ಕುರಿತು ಮಹತ್ವದ ಮಾಹಿತಿಯನ್ನು ನೀಡಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಬದಲಾಗುತ್ತಿರುವ ಈ ಜಗತ್ತಿನಲ್ಲಿ ಬದುಕು ಸಾರ್ಥಕ ತೆಯ ಕಡೆಗೆ ಸಾಗಬೇಕಾದರೆ ಸೃಷ್ಟಿ ಹಾಗೂ ಸೃಷ್ಟಿ ಕರ್ತನ ಅನುಬಂಧ ಬಹಳ ಪ್ರಮುಖವಾದದ್ದು. ಒಂದು ಶಿಕ್ಷಣ ಸಂಸ್ಥೆಗೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿ ಗಳು ಹಾಗೂ ಆಡಳಿತ ಮಂಡಳಿ ಇವು ನಾಲ್ಕು ಆಧಾರ ಸ್ಥಂಭಗಳಿದ್ದಂತೆ. ಇವುಗಳೆಲ್ಲವುದರ ಸಹಭಾಗಿತ್ವದಿಂದ ಮಾತ್ರ ಒಂದು ಉತ್ತಮ ಶಿಕ್ಷಣ ಸಂಸ್ಥೆ ರೂಪುಗೊಳ್ಳುತ್ತದೆ ಎಂಬ ಹೇಳಿದರು.
ಶಾಲಾ ವಿದ್ಯಾರ್ಥಿಗಳ ತಂಡ ಶಾಲೆ ಹಾಗೂ ಗುರಿವಿನ ಮಹತ್ವವನ್ನು ಸಾರುವ ನೃತ್ಯವನ್ನು ಪ್ರದರ್ಶಿಸಿದರು. ಸಭೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸಿಫ್ ಬ್ಯಾರಿ, ಸಂಯೋಜಕ ಆಕಾಶ್ ಹಾಗೂ ಎಲ್ಲಾ ವಿಭಾಗಳ ಪ್ರಾಂಶುಪಾಲರು, ಶಿಕ್ಷಕ-ರಕ್ಷಕ ಸಂಘದ ಮುಖ್ಯ ಸಲಹೆಗಾರ ಹಾಜಿ ಅಬುಷೇಕ್ ಸಾಹೇಬ್ ಹಾಗೂ ಪದಾಧಿಕಾರಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಜೆನಿಫರ್ ಸ್ವಾಗತಿಸಿದರು. ಸಂಗೀತ ವಂದಿಸಿದರು. ಎಲಿಟಾ ಕಾರ್ಯಕ್ರಮ ನಿರೂಪಿಸಿದರು.