ಕೊಣಾಜೆ: ಗುಡ್ಡ ಕುಸಿದು ಮನೆಗಳಿಗೆ ಹಾನಿ
ಕೊಣಾಜೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೊಣಾಜೆ, ಹರೇಕಳ, ಬೆಳ್ಕ ವ್ಯಾಪ್ತಿಯ ಹಲವೆಡೆ ಗುಡ್ಡ ಕುಸಿತ, ಮನೆಗಳಿಗೆ ಹಾನಿ ಘಟನೆಗಳು ಮುಂದುವರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಗಾಳಿ ಮಳೆಯಿಂದಾಗಿ ಹರೇಕಳ ಗ್ರಾಮದ ಗುಡ್ಪಾಲ್ ಸಲಾಂ ಎಂಬವರ ಮನೆಯ ಒಂದು ಭಾಗವು ಕುಸಿದು ಬಿದ್ದು ಹಾನಿಯಾಗಿದೆ. ಅಂಬ್ಲಮೊಗರು ಗ್ರಾಮದ ಆನಂದ ಪೂಜಾರಿ ಎಂಬವರ ಮನೆಯೂ ಗಾಳಿ ಮಳೆಗೆ ಜಖಂಗೊಂಡಿದೆ. ಬೆಳ್ಮಗ್ರಾಮದ ಅಬೂಬಕ್ಕರ್ ಎಂಬವರ ಮನೆಗೆ ಮರ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದ್ದು, ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳ್ಮ ಗ್ರಾಮದ ಕಲ್ಲುಗುಡ್ಡೆ ಎಂಬ್ಲಲಿನ ಮುಸ್ತಫಾ ಎಂಬವರ ಮನೆಗೆ ಗುಡ್ಡ ಕುಸಿದು ಹಾನಿಯಾಗಿರುವ ಘಟನೆ ನಡೆದಿದೆ. ಪಜೀರುಗುತ್ತು ಎಂಬಲ್ಲಿ ರಮೇಶ್ ಎಂಬವರ ಮನೆಯ ಬಳಿ ಗುಡ್ಡ ಕುಸಿದುಬಿದ್ದಿದೆ.
ಶಾರ್ಟ್ ಸರ್ಕ್ಯೂಟ್: ಇರಾ ಗ್ರಾಮದ ಪಂಜಾಜೆ ಎಂಬಲ್ಲಿರುವ ಬಯೋ-ಫುಯಲ್ಟೆಕ್ ಕಂಪೆನಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಅವಘಡ ಸಂಭವಿಸಿ ಬೆಂಕಿ ಅವಘಡ ಸಂಭವಿಸಿದ್ದು, ತೀವ್ರ ಮಳೆ ಇದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.