ಮಂಗಳೂರು: ಜು.16 ರಂದು ಗುರು ಪೂರ್ಣಿಮಾ ಆಚರಣೆ
ಮಂಗಳೂರು, ಜು.11: ಮಾತಾ ಅಮೃತಾನಂದಮಯಿ ಮಠ ಮಂಗಳೂರು ವತಿಯಿಂದ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಜು.16ರಂದು ಗುರು ಪೂರ್ಣಿಮಾ ಆಚರಣೆ ನಡೆಯಲಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೇವಾ ಸಮಿತಿ ಅಧ್ಯಕ್ಷ ಡಾ.ವಸಂತ ಕುಮಾರ ಪೆರ್ಲ ಅವರು ಮುಂಗಳವಾರ ಸುದ್ದಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಲೋಕ ಕಲ್ಯಾಣಾರ್ಥವಾಗಿ ಈ ಕಾರ್ಯಕ್ರಮ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಮೂರು ಜಿಲ್ಲೆಗಳಿಂದ ಸುಮಾರು 2,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಸಾರಥ್ಯದಲ್ಲಿ ಅಂದು ಬೆಳಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಅಮೃತ ಬಂಧನ್: ಆಧ್ಯಾತ್ಮಿಕ ಆಸಕ್ತಿ ಉಳ್ಳವರು, ಮಠದ ಸಮಾಜಮುಖಿ ಸೇವಾ ಯೋಜನೆಗಳಲ್ಲಿ ಭಾಗವಹಿಸಲು ಇಚ್ಛೆ ಇರುವವರು ಅಮೃತಬಂಧನ್ ಕುಟುಂಬವನ್ನು ಸೇರುವುದಕ್ಕೆ ಅವಕಾಶವಿದೆ. ಅಂದು ಪೂಜಾ ವಿಧಿಗಳೊಂದಿಗೆ ಸದಸ್ಯತ್ವ ಸ್ವೀಕಾರ ಮಾಡಲಾಗುತ್ತದೆ.
2,000 ಸಸಿಗಳ ವಿತರಣೆ : ಪ್ರಕೃತಿ ಸಂರಕ್ಷಣೆ ಉದ್ದೇಶಕ್ಕಾಗಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಂಯುಕ್ತಾಶ್ರಯದಲ್ಲಿ ಇದೇ ಸಂದರ್ಭದಲ್ಲಿ 2,000 ಸಸಿಗಳನ್ನು ವಿತರಣೆ ಮಾಡಲಾಗುವುದು ಎಂದು ವಸಂತ ಕುಮಾರ ಪೆರ್ಲ ಮಾಹಿತಿ ನೀಡಿದರು.
ಸಮಿತಿ ಉಪಾಧ್ಯಕ್ಷ ಸುರೇಶ್ ಅಮೀನ್, ವೈದ್ಯಕೀಯ ಸೇವಾ ವಿಭಾಗದ ಡಾ. ದೇವದಾಸ ಪುತ್ರನ್ ಉಪಸ್ಥಿತರಿದ್ದರು.