ಅನಧಿಕೃತ ಹಂದಿ ಫಾರ್ಮ್ ತೆರವುಗೊಳಿಸುವಂತೆ ಮಂಗಳೂರು ಮಹಾ ನಗರ ಪಾಲಿಕೆ ಆದೇಶ
ಮಂಗಳೂರು: ಇಲ್ಲಿನ ಮಹಾ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ 20ರ ಓಂಕಾರ ನಗರದಲ್ಲಿ ಅನಧಿಕೃತವಾಗಿ ಸಾಕುತ್ತಿದ್ದ ಹಂದಿ ಫಾರ್ಮ್ ತೆರವು ಗೊಳಿಸುವಂತೆ ಮಂಗಳೂರು ಮಹಾ ನಗರ ಪಾಲಿಕೆ ಆರೋಗ್ಯ ಅಧಿಕಾರಿ ಆದೇಶಿಸಿದ್ದಾರೆ.
ಓಂಕಾರ ನಗರದಲ್ಲಿ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಅಲ್ವರಿಸ್ ಫಾರ್ಮ್ ಹಂದಿಗೂಡು ರಚಿಸಿಕೊಂಡು ಅಲ್ಲಿ ಹಲವಾರು ಹಂದಿಗಳನ್ನು ಸಾಕಿರುವುದು ಕಂಡು ಬಂದಿದೆ. ಇದರಿಂದ ಫಾರ್ಮ್ ನ ನೆರೆಹೊರೆಯವರ ಆರೋಗ್ಯಕ್ಕೆ ತೊಂದರೆಯಾಗುತ್ತಿರುವುದು ತಿಳಿದು ಬಂದಿದೆ.
ನೋಟೀಸ್ ಜಾರಿ ಮಾಡಿದ 30 ದಿನಗಳ ಒಳಗೆ ಹಂದಿಗಳನ್ನು ಹಂದಿಗೂಡಿನಿಂದ ತೆರವುಗೊಳಿಸಬೇಕು ಅಥವಾ ಮಹಾ ನಗರ ಪಾಲಿಕೆಯ ವ್ಯಾಪ್ತಿಯಿಂದ ಹೊರಗೆ ಹಂದಿ ಸಾಕಲು ಸೂಕ್ತ ಪರವಾನಿಗೆ ಇರುವ ಸ್ಥಳಕ್ಕೆ ಸ್ಥಳಾಂತರಿಸಬೇಕು. ತಪ್ಪಿದಲ್ಲಿ ಕರ್ನಾಟಕ ಮುನಿಸಿಪಲ್ ಕಾರ್ಪೊರೇಶನ್ ಕಾಯ್ದೆ (1976) ಅಧಿನಿಯಮ 344ರ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಉಂಟಾದ ಕಷ್ಟ ನಷ್ಟಗಳಿಗೆ ಹಂದಿ ಸಾಕಣೆದಾರರೇ ಜವಾಬ್ದಾರರಾಗಿರುತ್ತಾರೆ ಎಂದು ಅವರು ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.
ಮಹಾ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ 20ರ ಓಂಕಾರ ನಗರದಲ್ಲಿ ಅನಧಿಕೃತವಾಗಿ ಸಾಕುತ್ತಿದ್ದ ಹಂದಿ ಫಾರ್ಮ್ ತೆರವು ಗೊಳಿಸುವಂತೆ ಗ್ರಾಮಸ್ಥರು ವೈಟ್ ಗ್ರೊ ಅಗ್ರಿ ಎಲ್ ಎಲ್ ಪಿ ಅಣಬೆ ತಯಾರಿಕಾ ಘಟಕ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಹಾ ನಗರ ಪಾಲಿಕೆಗೆ ದೂರು ನೀಡಿ ಆಗ್ರಹಿಸಿದ್ದರು.