ಮಂಗಳೂರು ತಾಲೂಕು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘಕ್ಕೆ ಆಯ್ಕೆ
ಮಂಗಳೂರು: ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘ(ರಿ)ದ ಮಂಗಳೂರು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯು ಸಂಘದ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆ.ಕೆ. ಅವರ ಸಮ್ಮುಖ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಕಬೀರ್, ಪ್ರಧಾನ ಕಾರ್ಯದರ್ಶಿಯಾಗಿ ನಿಸಾರ್ ಅಹ್ಮದ್ ಸಾಮಾಣಿಗೆ, ಗೌರವ ಸಲಹೆಗಾರರಾಗಿ ಎಂ.ಎಸ್. ಅಬ್ದುಲ್ ಹಮೀದ್, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್, ಉಪಾಧ್ಯಕ್ಷರಾಗಿ ಶ್ರೀನಿವಾಸ್, ನಝೀರ್ ಎಂ.ಎಚ್, ಪಿ. ನಾರಾಯಣ್, ಕಾರ್ಯದರ್ಶಿಯಾಗಿ ಕೈಲಾಸ್ ಬಾಬು, ಜೊತೆ ಕಾರ್ಯದರ್ಶಿಯಾಗಿ ಶ್ರವಣ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ನವಾಝ್, ಇಮ್ತಿಯಾಝ್, ಯಚ್.ಎ. ರೆಹಮಾನ್, ವೈಶಾಕ್, ಜಯಂತ್ ಸಾಲಿಯಾನ್, ಅಶ್ವಥ್ ಸಿ.ಎಚ್, ಹುಸೇನ್ ಸಿರಾಜ್, ಪೀಟರ್ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.
Next Story