ಆನ್‌ಲೈನ್ ವಂಚನೆ: ಪ್ರಕರಣ ದಾಖಲು
ಮಂಗಳೂರು, ಜೂ.30: ಆನ್‌ಲೈನ್ ಗೂಗಲ್ ರಿವ್ಯೆ ಟಾಸ್ಕ್ ನೆಪದಲ್ಲಿ ಕಮಿಷನ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 1.60 ಲಕ್ಷ ರೂ. ವಂಚಿಸಿದ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.26ರಂದು ಬೆಳಗ್ಗೆ 10:24ಕ್ಕೆ ಅಪರಿಚಿತನು ತನಗೆ ವಾಟ್ಸ್‌ಆ್ಯಪ್ ಸಂದೇಶ ಕಳಿಸಿ ಆನ್‌ಲೈನ್ ಗೂಗಲ್ ರಿವ್ಯ ಟಾಸ್ಕ್ ಕೆಲಸ ಮಾಡಿದರೆ ಕಮಿಷನ್ ಕೊಡುವುದಾಗಿ ತಿಳಿಸಿ ಲಿಂಕ್ ಕಳುಹಿಸಿದ್ದ. ಅದರಂತೆ ತಾನು ಟೆಲಿಗ್ರಾಂ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದೆ. ಗ್ರೂಪ್‌ನಲ್ಲಿ ಗೂಗಲ್ ರಿವ್ಯ ಟಾಸ್ಕ್‌ಗಳನ್ನು ಕಳುಹಿಸಿದ್ದು, ತಾನು 10 ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ್ದೆ. ಅಂತೆಯೇ ಒಂದು ಟಾಸ್ಕ್‌ಗೆ 25 ರೂ.ನಂತೆ 250 ರೂ.ಗಳನ್ನು ತನ್ನ ಖಾತೆಗೆ ಪಾವತಿ ಯಾಗಿದೆ. ಬಳಿಕ ತನಗೆ ಬೇರೆ ಬೇರೆ ರೀತಿಯ ಗೂಗಲ್ ರಿವ್ಯ ಟಾಸ್ಕ್‌ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ತಿಳಿಸಿ ನಾನಾ ಹಂತಗಳಲ್ಲಿ 1.60 ಲಕ್ಷ ರೂ.ಪಡೆದು ವಂಚಿಸಿರುವುದಾಗಿ ಫಿರ್ಯಾದಿಯು ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story