ಉಡುಪಿ ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆ
ಉಡುಪಿ, ಜೂ.27: ತಡವಾಗಿ ಪ್ರಾರಂಭಗೊಂಡ ಮುಂಗಾರು ಮಳೆ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ ಕ್ಷೀಣಿಸಲಾರಂಭಿಸಿದೆ. ಇಂದು ಜಿಲ್ಲೆಯಲ್ಲಿ ಸರಾಸರಿ 12.2ಮಿ.ಮೀ. ಮಾತ್ರ ಮಳೆಯಾಗಿದೆ.
ಉಡುಪಿಯಲ್ಲಿ 23.0ಮಿ.ಮೀ, ಬ್ರಹ್ಮಾವರದಲ್ಲಿ 17.2, ಕಾಪು 16.1, ಕುಂದಾಪುರ 10.6, ಬೈಂದೂರು 4.9, ಕಾರ್ಕಳ 11.5, ಹೆಬ್ರಿ 12.3ಮಿ.ಮೀ. ಮಾತ್ರ ಮಳೆ ಬಿದ್ದಿದೆ.
ದಿನದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾದ ವರದಿ ಬಂದಿವೆ. ಬ್ರಹ್ಮಾವರ ತಾಲೂಕು ಹನೆಹಳ್ಳಿಯಲ್ಲಿ ನಾರಾಯಣ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದರೆ, ಕುಂದಾಪುರ ತಾಲೂಕು ಉಪ್ಪಿನಕುದ್ರು ಮಹಾಲಕ್ಷ್ಮೀ ಎಂಬವರ ಮನೆಗೆ 40,000ರೂ., ಕುಂಭಾಷಿಯ ಮೂರ್ತಿ ಎಂಬವರ ಮನೆಗೆ 25 ಸಾವಿರ ರೂ ಹಾಗೂ ಗುಲ್ವಾಡಿಯ ಶೇಖರ ಎಂಬವರ ಮನೆಊ 25,000 ನಷ್ಟವಾಗಿರುವ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ದಿನದ ಗರಿಷ್ಠ ಉಷ್ಣಾಂಶ 32ಡಿಗ್ರಿ ಸೆ. ಆಗಿದ್ದರೆ, ಕನಿಷ್ಠ ಉಷ್ಣಾಂಶ 23.4ಡಿಗ್ರಿ ಆಗಿತ್ತು. ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯ ಅಲ್ಲಲ್ಲಿ ಹಗುರದಿಂದ ಸಾಧಾರಮ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಂದೂ ಎಚ್ಚರಿಕೆ ನೀಡಲಾಗಿದೆ.