ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಣೆ
ಸಾಂದರ್ಭಿಕ ಚಿತ್ರ
ಉಳ್ಳಾಲ: ಮೂವರು ಯುವಕರು ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ನೀರು ಪಾಲಾಗುತ್ತಿದ್ದ ಓರ್ವನನ್ನು ಸ್ಥಳೀಯ 'ಶಿವಾಜಿ ಜೀವರಕ್ಷಕ ದಳ'ದ ಸದಸ್ಯರು ರಕ್ಷಿಸಿದ್ದಾರೆ.
ಬೆಂಗಳೂರಿನ ಯಶವಂತಪುರ ನಿವಾಸಿ ನಿಝಾಮ್ (35) ರಕ್ಷಣೆ ಗೊಳಗಾದವರು ಎಂದು ತಿಳಿದು ಬಂದಿದೆ.
ಮೊಗವೀರಪಟ್ಣದ ಶಿವಾಜಿ ಜೀವರಕ್ಷಕ ದಳದ ವಿಕ್ರಮ್ ಪುತ್ರನ್, ಶ್ರವಣ್, ದೀಕ್ಷಿತ್ ಬಂಗೇರ, ದೀಕ್ಷಿತ್ ಚಂದನ್, ನಿಶಾಂತ್, ರಕ್ಷಿತ್ ಬಂಗೇರ, ರವಿ ಕಾಂಚನ್ ಸೇರಿ ನಿಝಾಮ್ ನನ್ನು ರಕ್ಷಿಸಿದ್ದಾರೆ.
ಗುರುವಾರ ಬೆಂಗಳೂರಿನಿಂದ ಮೂವರು ಸ್ನೇಹಿತರು ಉಳ್ಳಾಲ ಬೀಚ್ ನಲ್ಲಿ ಸಮುದ್ರ ವಿಹಾರಕ್ಕೆಂದು ಬಂದಿದ್ದರು. ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಿದ್ದು, ಸಮುದ್ರ ತೀರದಲ್ಲಿ ನೀರಾಟವಾಡುತ್ತಿದ್ದ ಮೂವರ ಪೈಕಿ ನಿಝಾಮ್ ಅಲೆಗಳ ನಡುವೆ ಸಿಲುಕಿ ಸಮುದ್ರಪಾಲಾಗಿದ್ದ ಎನ್ನಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಶಿವಾಜಿ ಜೀವರಕ್ಷಕ ತಂಡದ ಸದಸ್ಯರು ಗಮನಿಸಿ ನಿಝಾಂನನ್ನು ರಕ್ಷಿಸಿದ್ದಾರೆನ್ನಲಾಗಿದೆ.
ಈ ಸಂಬಂಧ ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Next Story