ಯುನಿವೆಫ್: ಮೌಲಾನಾ ಆಝಾದ್/ಅಲ್ಲಾಮಾ ಇಕ್ಬಾಲ್ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಮಂಗಳೂರು : ಯುನಿವೆಫ್ ಕರ್ನಾಟಕ ಎಜುಕೇಶನ್ ಫೋರಂ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳಲ್ಲಿ ದ.ಕ. ಜಿಲ್ಲಾ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿರುವ ಆರ್ಥಿಕವಾಗಿ ಹಿಂದುಳಿದಿರುವ ಬಡ ಮುಸ್ಲಿಮ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಅನುಕ್ರಮವಾಗಿ ಮೌಲಾನಾ ಅಬುಲ್ ಕಲಾಮ್ ಆಝಾದ್ ಮತ್ತು ಸರ್ ಅಲ್ಲಾಮಾ ಇಕ್ಬಾಲ್ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಎಸ್ಸೆಸ್ಸೆಲ್ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಓರ್ವ ವಿದ್ಯಾರ್ಥಿ ಮತ್ತು ಓರ್ವ ವಿದ್ಯಾರ್ಥಿನಿಗೆ ಮೌಲಾನಾ ಅಬುಲ್ ಕಲಾಮ್ ಆಝಾದ್ ಪ್ರಶಸ್ತಿ (ಒಟ್ಟು ಎರಡು ಪ್ರಶಸ್ತಿಗಳು) ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತಲಾ ಓರ್ವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಸರ್ ಅಲ್ಲಾಮಾ ಇಕ್ಬಾಲ್ ಪ್ರಶಸ್ತಿ (ಒಟ್ಟು ಮೂರು ಪ್ರಶಸ್ತಿಗಳು) ಪ್ರಶಸ್ತಿಯು ತಲಾ 5000 ರೂಪಾಯಿ ನಗದು ಮತ್ತು ಪ್ರಮಾಣ ಪತ್ರವನ್ನೊಳಗೊಂಡಿರುವುದು.
ಷರತ್ತುಗಳು:
2022-23ನೇ ಸಾಲಿನಲ್ಲಿ ಅತ್ಯಧಿಕ ಅಂಕ ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಮಾತ್ರ ಪರಿಗಣಿಸಲಾಗುವುದು.
ಅರ್ಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ವಿಳಾಸ, ಫೋಟೋ, ಅಂಕ ಪಟ್ಟಿಯ ಪ್ರತಿ, ಕಲಿತ ಶಾಲೆಯ ಹೆಸರು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಬೇಕು.
ಅಂಕಪಟ್ಟಿ, ಕಲಿತ ಶಾಲೆಯ ಹೆಸರು, ಫೋಟೋ, ಮೊಬೈಲ್ ಸಂಖ್ಯೆ ಮತ್ತು ವಿಳಾಸವಿಲ್ಲದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಇದು ವಿದ್ಯಾರ್ಥಿ ವೇತನ ಅಲ್ಲ. ಅರ್ಹ ಐದು ವಿದ್ಯಾರ್ಥಿಗಳಿಗೆ ಮಾತ್ರ ಪ್ರಶಸ್ತಿ. ಪ್ರಶಸ್ತಿಯು ದ.ಕ. ಜಿಲ್ಲೆಗೆ ಮಾತ್ರ ಸೀಮಿತ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಆಗಸ್ಟ್ 2023*
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಶಸ್ತಿ ವಿತರಣಾ ದಿನಾಂಕವನ್ನು ತಿಳಿಸಲಾಗುವುದು.
ಅರ್ಜಿಯನ್ನು ಸಾಮಾನ್ಯ ಅಂಚೆಯಲ್ಲಿ ಕಳುಹಿಸಬೇಕು. ಸ್ಫೀಡ್ ಪೋಸ್ಟ್, ಕೊರಿಯರ್, ರಿಜಿಸ್ಟರ್ಡ್ ಪೋಸ್ಟ್ ಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಕಳುಹಿಸಬೇಕಾದ ವಿಳಾಸ
ಶೈಕ್ಷಣಿಕ ಪ್ರಶಸ್ತಿ ವಿಭಾಗ, ಪೋಸ್ಟ್ ಬಾಕ್ಸ್ ಸಂಖ್ಯೆ 576, ಕಂಕನಾಡಿ ಪೋಸ್ಟ್ ಆಫೀಸ್, ಮಂಗಳೂರು - 575 002. ಆಯ್ಕೆದಾರರ ತೀರ್ಮಾನವೇ ಅಂತಿಮ. ಯಾವುದೇ ಶಿಫ಼ಾರಸ್ಸುಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಯು.ಕೆ. ಖಾಲಿದ್, ಸಂಚಾಲಕರು, ಯುನಿವೆಫ್ ಕರ್ನಾಟಕ ಎಜುಕೇಶನ್ ಫೋರಂ ಮೊ.98451 99931