ಉಡುಪಿ ಸುಲ್ತಾನ್‌ನಲ್ಲಿ ‘ವಿಶ್ವ ರತ್ನ-ಜೆಮ್ಸ್ ಆಫ್ ವರ್ಲ್ಡ್’ ಪ್ರದರ್ಶನಕ್ಕೆ ಚಾಲನೆ
ಉಡುಪಿ: ನಗರದ ವಿಎಸ್‌ಟಿ ರಸ್ತೆಯ ವೆಸ್ಟ್‌ಕೋಸ್ಟ್ ಕಟ್ಟಡದಲ್ಲಿ ರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಂನಲ್ಲಿ ಜು.23ರವರೆಗೆ ಹಮ್ಮಿಕೊಳ್ಳಲಾದ ‘ವಿಶ್ವ ರತ್ನ- ಜೆಮ್ಸ್ ಆಫ್ ವರ್ಲ್ಡ್’ ಪ್ರದರ್ಶನ ಮತ್ತು ಮಾರಾಟಕ್ಕೆ ಇಂದು ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಜಸ್ಮಿನ್ ಹಸನ್ ಮತ್ತು ಮಂಗಳೂರಿನ ಯಾಸ್ಮೀನ್ ಅಕ್ಬರ್ ಪ್ರಿಸಿಯಸ್ ಜೆಮ್ ಜ್ಯುವೆಲ್ಲರಿ ಹಾಗೂ ಯಾಸ್ಮೀನ್ ತೋಟ ಅನ್‌ಕಟ್ ಜೆಮ್ ಜ್ಯುವೆಲ್ಲರಿಯನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಸಿಬ್ಬಂದಿ ರಿಫಾ ಅಗ ಕಾರ್ಯಕ್ರಮ ನಿರೂಪಿಸಿದರು. ಸುಲ್ತಾನ್ ಗೋಲ್ಡ್ ವಾಚ್ ವಿಭಾಗದ ಮುಖ್ಯಸ್ಥ ಅಬ್ದುಲ್ ರಶೀದ್ ಮುಲ್ಕಿ, ಸುಲ್ತಾನ್ ಗ್ರೂಪ್ನ ಉಡುಪಿ ಫ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಸೇಲ್ಸ್ ಮೇನೆಜರ್ ಇಲಿಯಾಸ್ ವಯನಾಡ್, ಡೈಮಂಡ್ ವಿಭಾಗದ ಇನ್‌ಚಾರ್ಜ್ ವಾಹಿದ್ ಪಿ.ಎಂ., ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ವಿಶ್ವದ ವಿವಿಧ ದೇಶಗಳ ವಿವಿಧ ಹೊಸ ಮಾದರಿಯ ರತ್ನ ಆಭರಣಗಳ ಸಂಗ್ರಹ ಈ ಪ್ರದರ್ಶನದಲ್ಲಿದೆ. ಜೆಮ್ ಮತ್ತು ಅನ್‌ಕಟ್ ಡೈಮಂಡ್ ಜ್ಯುವೆಲ್ಲರಿಯ ಮೆಕಿಂಗ್ ಚಾರ್ಜ್‌ನಲ್ಲಿ ಶೇ.೨೫ರಷ್ಟು ರಿಯಾಯಿತಿ ನೀಡ ಲಾಗುವುದು. ಅದೇ ರೀತಿ ಜೆಮ್ ಮತ್ತು ಅನ್ ಡೈಮಂಡ್ ಜ್ಯುವೆಲ್ಲರಿ ಯೊಂದಿಗೆ ಹಳೆಯ ಚಿನ್ನ ಎಕ್ಸ್‌ಚೇಂಜ್ ಮಾಡಿದ್ದಲ್ಲಿ ಪ್ರತಿ ಗ್ರಾಂಗೆ ಶೇ.೫೦ರೂ. ನೀಡಲಾಗುವುದು ಎಂದು ಮುಹಮ್ಮದ್ ಅಜ್ಮಲ್ ತಿಳಿಸಿದ್ದಾರೆ.