ಸಾಂಸ್ಕೃತಿಕ ಉತ್ಸವ- ಸಿರಿಬಾಗಿಲು ಯಕ್ಷವೈಭವ ಯಶಸ್ವಿ ಮೂರನೇ ದಿನ
ಕಾಸರಗೋಡು: ಆಷಾಡ ಮಾಸದ ವರ್ಷ ಧಾರೆಯ ಜತೆಗೆ ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನ ಸಾಂಸ್ಕೃತಿಕ ಉತ್ಸವ- ಯಕ್ಷ ವೈಭವಕ್ಕೆ ಸಾಕ್ಷಿ ಯಾಗಿರುವ ಯಕ್ಷಗಾನ ತಂಡಗಳು, ನೆರೆದ ಪ್ರೇಕ್ಷಕ ವೃಂದ ,ಜತೆಗೆ ಪ್ರತಿದಿನ 150ಕ್ಕೂ ಹೆಚ್ಚು ಕಲಾವಿದರು ಭಾಗಿಯಾದದ್ದು ವಿಶೇಷ. ಇಷ್ಟು ತಂಡಗಳಿಗೆ ಒಂದೇ ವೇದಿಕೆಯಲ್ಲಿ ಅವಕಾಶ ಕಲ್ಪಿಸಿದ ಬಗ್ಗೆ ಹಲವು ಗಣ್ಯರಿಂದ ಮೆಚ್ಚುಗೆಯ ಮಾತುಗಳು. ತೆಂಕುತಿಟ್ಟು ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ಜನ್ಮನಾಡಿನಲ್ಲಿ ಮಹಾಕವಿಗೆ ಸಂದ ಗೌರವೇ ಸರಿ.
ಶ್ರೀ ಧರ್ಮಸ್ಥಳ ಮೇಳದಲ್ಲಿ ಹಿರಿಯ ಕಲಾವಿದರಾಗಿದ್ದ ಕುಂಬ್ಳೆ ಶ್ರೀಧರ್ರಾವ್ ಅವರಿಗೆ ನೆನ್ನೆಯ ದಿನ ನುಡಿ ನಮನ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದು ತಾರೀಕು 19 ರಂದು ಧರ್ಮಸ್ಥಳ ಮೇಳದ ಮತ್ತೊಬ್ಬ ಹಿರಿಯ ಕಲಾವಿದರಾದ ಗಂಗಾಧರ ಪುತ್ತೂರು ಅವರಿಗೆ ನುಡಿ ನಮನ ಶ್ರದ್ಧಾಂಜಲಿ ಸಮರ್ಪಿಸಲಾಯಿತು ಪ್ರತಿಷ್ಠಾನದ ಲೋಕಾರ್ಪಣೆಯ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ಹಿರಿಯ ಕಲಾವಿದರು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ತಿಳಿಸಿದರು.
ನಾಳೆಯ ದಿನ ಸಮಾರೋಪ ಸಮಾರಂಭ ನಡೆಯಲಿದೆ. ಎಡನೀರು ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆಯೂರು ಮಠ ಆಶೀರ್ವಚನ ನೀಡಲಿದ್ದಾರೆ ಸಭಾಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವಾ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ರಾಜಶೇಖರ್ ಹೆಬ್ಬಾರ್ ಐರೋಪ್ಯ, ಅಗರಿ ರಾಘವೇಂದ್ರರಾವ್, ಸತೀಶ್ ಬೆಂಗಳೂರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೂವರು ವಿದ್ವಾಂಸರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ನೀಡಲಾಗುವುದು. ನಾಳೆಯ ದಿನ ವಿಶೇಷವಾಗಿ ಮೂರು ಬಡಗುತಿಟ್ಟಿನ ತಂಡಗಳು ಪ್ರದರ್ಶನ ನೀಡಲಿವೆ.