ಕಾಸರಗೋಡು: ಬಸ್‌ಗಳ ನಡುವೆ ಅಪಘಾತ; 12 ಮಂದಿಗೆ ಗಾಯ

ಕಾಸರಗೋಡು: ಖಾಸಗಿ ಬಸ್ಸುಗಳ ನಡುವೆ ಉಂಟಾದ ಅಪಘಾತದಲ್ಲಿ 12 ಮಂದಿ ಗಾಯಗೊಂಡ ಘಟನೆ ರವಿವಾರ ಸಂಜೆ ನಗರದ ಬ್ಯಾಂಕ್ ರಸ್ತೆಯಲ್ಲಿ ನಡೆದಿದೆ.
ಟೂರಿಸ್ಟ್ ಬಸ್ ಮತ್ತು ಮತ್ತು ಮಧೂರು - ಕಾಸರಗೋಡು ನಡುವೆ ಸಂಚಾರ ನಡೆಸುತ್ತಿರುವ ಬಸ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದು ಅಪಘಾತ ನಡೆದಿದೆ.
ಅಪಘಾತ ದಲ್ಲಿ ಗಾಯ ಗೊಂಡವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನಾಗರಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಖಾಸಗಿ ಬಸ್ ಚಾಲಕ ಕಮಲಾಕ್ಷ ಗಂಭೀರ ಗಾಯಗೊಂಡಿದ್ದು, ಟೂರಿಸ್ಟ್ ಬಸ್ ಚಾಲಕ ವಿದ್ಯಾನಗರದ ಸಫೀರ್ (40), ಮನ್ನಿಪ್ಪಾಡಿಯ ಸ್ವಪ್ನಾ (49) , ಅಲಂಪಾಡಿಯ ಮುಸ್ತಫ ( 40) , ಪಟ್ಲದ ಅಬ್ಬಾಸ್ (66), ಅಲಂಪಾಡಿಯ ಅಬ್ದುಲ್ ರಹ್ಮಾನ್ ( 50), ಮೀಪುಗುರಿಯ ಸುರೇಶ್ (49), ಉಳಿಯತ್ತಡ್ಕದ ಸರಸ್ವತಿ (57) ಮೊದಲಾದವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story