ಕಾಸರಗೋಡು: ಶಸ್ತ್ರಚಿಕಿತ್ಸೆಗೆ ರೋಗಿಯಿಂದ ಲಂಚ ಪಡೆದ ಆರೋಪ; ಜನರಲ್ ಆಸ್ಪತ್ರೆಯ ವೈದ್ಯ ಬಂಧನ
ಕಾಸರಗೋಡು : ಶಸ್ತ್ರಚಿಕಿತ್ಸೆಗೆ ರೋಗಿಯಿಂದ ಲಂಚ ಪಡೆದ ಆರೋಪದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯ ನನ್ನು ವಿಜಿಲೆನ್ಸ್ ಬಂಧಿಸಿದೆ.
ಡಾ. ವೆಂಕಟಗಿರಿ ಎಂಬಾತನನ್ನು ನುಳ್ಳಿಪ್ಪಾಡಿಯಲ್ಲಿರುವ ಮನೆಯಿಂದ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿ ವಿಜಿಲೆನ್ಸ್ ಬಂಧಿಸಿದೆ.
ಮಧೂರು ಪಟ್ಲದ ನಿವಾಸಿಯೊಬ್ಬರು ನೀಡಿದ ದೂರಿನಂತೆ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ. ಹರ್ನಿಗೆ ಸಂಬಂಧಿಸಿ ಚಿಕಿತ್ಸೆಗೆ ಆಗಮಿಸಿದ್ದು, ಈ ವೇಳೆ ಶಸ್ತ್ರಚಿಕಿತ್ಸೆ ಅಗತ್ಯ ಇರುವುದಾಗಿ ವೈದ್ಯ ಸೂಚಿಸಿದ್ದು, ಡಿಸೆಂಬರ್ ತಿಂಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಎರಡು ಸಾವಿರ ರೂ. ನೀಡುವಂತೆ ಈ ವ್ಯಕ್ತಿಗೆ ವೈದ್ಯ ತಿಳಿಸಿದ್ದನು ಎನ್ನಲಾಗಿದೆ.
ಈ ಬಗ್ಗೆ ವಿಜಿಲೆನ್ಸ್ ಗೆ ಇವರು ಮಾಹಿತಿ ನೀಡಿದ್ದರು. ಮಂಗಳವಾರ ಸಂಜೆ ನುಳ್ಳಿಪ್ಪಾಡಿಯಲ್ಲಿರುವ ಮನೆಗೆ ತೆರಳಿ ಎರಡು ಸಾವಿರ ರೂ. ಹಸ್ತಾ೦ತರಿಸಿದ್ದು, ಇದರ ನಡುವೆ ಹೊಂಚು ಹಾಕಿ ಕುಳಿತಿದ್ದ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ ವೈದ್ಯನನ್ನು ವಶಕ್ಕೆ ಪಡೆದುಕೊಡರು.
ಅಬ್ಬಾಸ್ ಎಂಬವರು ನೀಡಿದ ಎರಡು ಸಾವಿರ ರೂ. ವನ್ನು ವಶಕ್ಕೆ ಪಡೆದುಕೊಂಡರು. 2019ರಲ್ಲೂ ಡಾ . ವೆಂಕಟಗಿರಿ ವಿರುದ್ಧ ಲಂಚ ಪಡೆದ ಬಗ್ಗೆ ವಿಜಿಲೆನ್ಸ್ ಗೆ ದೂರು ಲಭಿಸಿತ್ತು.