ಕಾಸರಗೋಡು | ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ

ಕಾಸರಗೋಡು: ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ವರ್ಕಾಡಿಯಲ್ಲಿ ನಡೆದಿದೆ.
ವರ್ಕಾಡಿ ಸಮೀಪದ ನಾವಡ್ರಬೈಲ್ ನಿವಾಸಿ ಕ್ಸೇವಿಯರ್ ಡಿಸೋಜ(65) ಮೃತಪಟ್ಟವರು. ಮನೆಯಿಂದ 200 ಮೀಟರ್ ದೂರದಲ್ಲಿರುವ ಸಂಬಂಧಿಕರೊಬ್ಬರ ತೋಟದ ಕೆರೆಯಲ್ಲಿ ಗುರುವಾರ ಮಧ್ಯಾಹ್ನ ಅವರ ಮೃತದೇಹ ಪತ್ತೆಯಾಗಿದೆ.
ಕ್ಸೇವಿಯರ್ ಮಂಗಳವಾರ ರಾತ್ರಿ ಮನೆಯಿಂದ ಹೊರಗೆ ತೆರಳಿದವರು ಬಳಿಕ ನಾಪತ್ತೆಯಾಗಿದ್ದರು. ತಡರಾತ್ರಿ ತನಕ ಮನೆಗೆ ಹಿಂದಿರುಗದೆ ಹಿನ್ನಲೆಯಲ್ಲಿ ಮನೆಯವರು ಹಾಗೂ ಪರಿಸರ ವಾಸಿಗಳು ಶೋಧ ನಡೆಸಿದ್ದರು.
ನಾಪತ್ತೆ ಬಗ್ಗೆ ಮನೆಯವರು ಮಂಜೇಶ್ವರ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು. ಪೊಲೀಸರು ಮತ್ತು ನಾಗರಿಕರು ಹುಡುಕಾಟ ನಡೆಸುತ್ತಿದ್ದಂತೆ ಗುರುವಾರ ಮಧ್ಯಾಹ್ನ ಕೆರೆಯಲ್ಲಿ ಕ್ಸೇವಿಯರ್ ಮೃತದೇಹ ಪತ್ತೆಯಾಗಿದೆ.
ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.
Next Story