ಕಾಸರಗೋಡು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿರುವ ಜಿಲ್ಲೆ: ಸ್ಪೀಕರ್ ಯು.ಟಿ. ಖಾದರ್
ಬಿಲ್ಡಪ್ ಕಾಸರಗೋಡು ಸೊಸೈಟಿ ಸ್ವಾಗತ ಸಮಾರಂಭ
ಕಾಸರಗೋಡು: ಬಿಲ್ಡಪ್ ಕಾಸರಗೋಡು ಸೊಸೈಟಿ ಇತ್ತೀಚೆಗೆ ನಡೆಸಿದ ಸ್ವಾಗತ ಸಮಾರಂಭದಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಮಾತನಾಡಿ, ಕಾಸರಗೋಡು ಜಿಲ್ಲೆಯು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.
ಮಂಗಳೂರು ಮತ್ತು ಕಣ್ಣೂರು ವಿಮಾನ ನಿಲ್ದಾಣಗಳ ಉಪಸ್ಥಿತಿ, ಮಂಗಳೂರು ಸಮುದ್ರ ಬಂದರು ಸೇವೆ, ಜಿಲ್ಲೆಯಲ್ಲಿ ಕಡಿಮೆ ವೆಚ್ಚದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳ ಭೂಮಿ ಲಭ್ಯತೆ ಇವೆಲ್ಲ ಜಿಲ್ಲೆಯಲ್ಲಿ ಕೈಗಾರಿಕೀಕರಣಕ್ಕೆ ಹೆಚ್ಚುವರಿ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ನಿವೃತ್ತ ಐ.ಜಿ. ಕೆ.ವಿ.ಮಧುಸೂದನನ್ ನಾಯರ್, ಖ್ಯಾತ ಕೈಗಾರಿಕೋದ್ಯಮಿ ಎಂ.ಟಿ.ಪಿ. ಮುಹಮ್ಮದ್ ಕುಂಞಿ, ಚಿತ್ರನಟ ಮತ್ತು ವಕೀಲರಾದ ಗಂಗಾಧರನ್ ಕುಟ್ಟಮತ್, ಅಕ್ಕರ ಫೌಂಡೇಶನ್ ನಿರ್ದೇಶಕರಾದ ಫಾತಿಮಾ ಫಜ್ಲೀನ್ ಅವರನ್ನು ಸನ್ಮಾನಿಸಲಾಯಿತು.
ಬಿಲ್ಡಪ್ ಕಾಸರಗೋಡು ಸೊಸೈಟಿಯ ಅಧ್ಯಕ್ಷ ರವೀಂದ್ರನ್ ಕನ್ನಂಕೈ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ಬಾವಾ ಅವರು ಸ್ವಾಗತ ಭಾಷಣ ಮಾಡಿದರು.
ಕೆ.ವಿ.ಮಧುಸೂದನನ್ ನಾಯರ್, ಎಂ.ಟಿ.ಪಿ.ಮುಹಮ್ಮದ್ ಕುಂಞಿ, ಗಂಗಾಧರನ್ ಕುಟ್ಟಮತ್, ಅನೂಪ್ ಕಳನಾಡ್, ಡಾ.ರಶ್ಮಿಪ್ರಕಾಶ್, ದಯಾಕರ್ ಮಾಡ, ಹರೀಸ್ ಕದಿರಿ, ಬಾಲಾಮಣಿ ಟೀಚರ್, ಪ್ರೊ.ಸುಜಾತ, ರಫೀಕ್ ಮಾಸ್ತರ್, ಸಾದಿಕ್ ಮಂಜೇಶ್ವರಂ ಮತ್ತು ಮುಹಮ್ಮದಲಿ ಫತ್ತಾಹ್ ಉಪಸ್ಥಿತರಿದ್ದರು.
ಕೋಶಾಧಿಕಾರಿ ಸುಲೈಖಾ ಮಾಹಿನ್ ಧನ್ಯವಾದ ಅರ್ಪಿಸಿದರು.
ಅಂದು ಮಧ್ಯಾಹ್ನ 2 ಗಂಟೆಗೆ ಬಿಲ್ಡಪ್ ಕಾಸರಗೋಡು ಸೊಸೈಟಿ ಮತ್ತು ಎಎಸ್‌ಎಪಿ ಕಮ್ಯುನಿಟಿ ಸ್ಕಿಲ್ ಪಾರ್ಕ್ ಜಂಟಿಯಾಗಿ “ಕಾಸರಗೋಡು ಜಿಲ್ಲೆ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದರ ಪರಿಹಾರ” ಎಂಬ ಚರ್ಚಾಗೋಷ್ಠಿ ನಡೆಸಿತು.