ಕಾಸರಗೋಡು | ಸ್ಪೋಟಕ ಸಿಡಿದು ಸಾಕು ನಾಯಿ ಸಾವು; ಓರ್ವನ ಬಂಧನ

ಉಣ್ಣಿಕೃಷ್ಣನ್
ಕಾಸರಗೋಡು: ಸ್ಪೋಟಕ ಸಿಡಿದು ಸಾಕು ನಾಯಿ ಸಾವನ್ನಪ್ಪಿದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಹೇರೂರು ಮೀಪಿರಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಸ್ಪೋಟಕ ಇರಿಸಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಜೀಪನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಹೇರೂರು ಮೀಪಿರಿಯ ಭಾಸ್ಕರ ಎಂಬವರ ಮನೆ ಪರಿಸರದಲ್ಲಿ ಸ್ಫೋಟ ಸಂಭವಿಸಿದ್ದು, ಇವರ ಸಾಕು ನಾಯಿ ಸ್ಪೋಟಕ ಬಲಿಯಾಗಿದೆ. ಕುಂಡಂಗುಳಿಯ ಉಣ್ಣಿಕೃಷ್ಣನ್ (48) ಬಂಧಿತ ಆರೋಪಿ. ಕಾಡು ಹಂದಿಗಾಗಿ ಸ್ಪೋಟಕ ವಸ್ತು ಇರಿಸಲಾಗಿತ್ತು ಎನ್ನಲಾಗಿದೆ. ಶಬ್ದ ಕೇಳಿ ಪರಿಸರ ನಿವಾಸಿಗಳು ಶೋಧ ನಡೆಸಿದಾಗ ನಾಯಿ ಸತ್ತು ಬಿದ್ದಿರುವು ಗಮನಕ್ಕೆ ಬಂದಿತ್ತು.
ಶಂಕಾಸ್ಪದ ರೀತಿಯಲ್ಲಿದ್ದ ಜೀಪು ಹಾಗೂ ಓರ್ವನನ್ನು ಪತ್ತೆ ಹಚ್ಚಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉಣ್ಣಿ ಕೃಷ್ಣನ್ ಹಾಗೂ ಜೀಪನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಈತನ ಬಳಿ ಯಿಂದ ಎರಡು ಸ್ಪೋಟಕ ಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಹಂದಿ ಬೇಟೆಗೆ ಸುಮಾರು ಹತ್ತು ಮಂದಿಯ ತಂಡವು ಬಂದಿತ್ತು ಎನ್ನಲಾಗಿದೆ . ಉಳಿದವರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.