ಕಾಸರಗೋಡು | ಭಾರೀ ಮಳೆಗೆ ಕುಸಿದ ಮನೆಯ ಛಾವಣಿ
ಕಾಸರಗೋಡು: ಫೆಂಗಲ್ ಚಂಡಮಾರುತದ ಪ್ರಭಾವದಿಂದ ಸುರಿದ ಭಾರೀ ಕಾಸರಗೋಡು ಅಡ್ಕತಬೈಲ್ ನಲ್ಲಿ ಮನೆಯೊಂದರ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಅಡ್ಕತಬೈಲ್ ನಿವಾಸಿ ಕಿಶೋರ್ ಕುಮಾರ್ ಎಂಬವರ ಹೆಂಚಿನ ಮನೆಯ ಛಾವಣಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಏಕಾಏಕಿ ಕುಸಿದಿದೆ. ಈ ವೇಳೆ ಮನೆಯೊಳಗಿದ್ದ ಕಿಶೋರ್ ಕುಮಾರ್ ಮತ್ತು ಅವರ ಪತ್ನಿ ಶಶಿಕಲಾ ಹೊರಗಡೆ ಓಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಛಾವಣಿ ಕುಸಿತದಿಂದ ಮನೆ ಹಾನಿಯಾಗಿದ್ದು, ಭಾರೀ ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಹಲವೆಡೆ ಅಪಾರ ನಾಶ ನಷ್ಟ ಸಂಭವಿಸಿರುವುದು ವರದಿಯಾಗಿದೆ.
Next Story