ಕಾಸರಗೋಡು: ರಾಜ್ಯ ಮಟ್ಟದ ಕ್ವಿಝ್ ಸ್ಪರ್ಧೆಯಲ್ಲಿ ಆಲಿಯಾ ಕಾಲೇಜಿಗೆ ದ್ವಿತೀಯ ಸ್ಥಾನ
ಕೋಝಿಕ್ಕೋಡ್: ಪ್ರವಾದಿ ಮುಹಮ್ಮದ್ (ಸ)ರ ಸೀರತ್ ಪ್ರಯುಕ್ತ ಕೇರಳ ರಾಜ್ಯ ಸಂಘಟಿಸಿದ ರಾಜ್ಯಮಟ್ಟದ ಕ್ವಿಝ್ ಸ್ಪರ್ಧೆಯಲ್ಲಿ ಆಲಿಯಾ ಅರೆಬಿಕ್ ಕಾಲೇಜು ಕಾಸರಗೋಡು ಇಲ್ಲಿನ ವಿಧ್ಯಾರ್ಥಿಗಳಾದ ಮುಹಮ್ಮದ್ ಸಫ್ವಾನ್ ಬೋಳಂಗಡಿ ಹಾಗೂ ಅಬ್ದುಲ್ ಬಾಸಿತ್ ಕುಶಾಲನಗರ ಇವರ ತಂಡವು ದ್ವಿತೀಯ ಸ್ಥಾನ ಗಳಿಸಿದೆ.
ಸ್ಪರ್ದೆಯಲ್ಲಿ ಚಾಲಕ್ಕಲ್ ಇಸ್ಲಾಮಿಯಾ ಕಾಲೇಜಿನ ವಿಧ್ಯಾರ್ಥಿನಿಗಳಾದ ಹನ ವಿ.ಎ. ಹಾಗೂ ಫಾರಿಷಾ.ಎ.ಎ. ಪ್ರಥಮ ಸ್ಥಾನಿಯಾಗಿ ಉಮ್ರಾ ಯಾತ್ರೆಯ ಅರ್ಹತೆ ಗಳಿಸಿದರು.
ಮೂರನೇಯ ಸ್ಥಾನಿಯಾಗಿ ಮಾಹೆಯ ಅಲ್ ಫಲಾಹ್ ಕಾಲೇಜಿನ ಅಮ್ನ ಮತ್ತು ಶಹಾನ ಜಯಗಳಿಸಿದರು.
ಜಿಲ್ಲಾಮಟ್ಟದಲ್ಲಿ ವಿಜೇತರಾದ ವಿವಿಧ ಜಿಲ್ಲೆಗಳ ಒಟ್ಟು24 ಇಸ್ಲಾಮಿಕ್ ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಕಳೆದ ವರ್ಷ ಆಲಿಯಾ ಕಾಲೇಜು ತೃತೀಯ ಸ್ಥಾನ ಗಳಿಸಿತ್ತು. ಕೋಝಿಕೋಡ್ ನ ಎಂ.ಎಸ್.ಎಸ್ ಆಡಿಟೋರಿಯಂ ನಲ್ಲಿ ನಡೆದ ಈ ಕಾರ್ಯಕ್ರಮದ ಕೊನೆಯಲ್ಲಿ ಎಸ್.ಐ.ಓ ಇದರ ಮಾಜಿ ರಾಷ್ಟ್ರಾಧ್ಯಕ್ಷ ನಹಾಝ್ ಮಾಳ ವಿಜೇತರಿಗೆ ಬಹುಮಾನ ವಿತರಿಸಿದರು.
Next Story