ಮಂಜೇಶ್ವರ: ಕೊಡ್ಲಮೊಗರು, ಪಾತೂರು ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಕಳ್ಳತನಕ್ಕೆ ಯತ್ನ; ಪ್ರಕರಣ ದಾಖಲು
ಮಂಜೇಶ್ವರ: ಕೊಡ್ಲಮೊಗರು, ಪಾತೂರು ಸೇವಾ ಸಹಕಾರಿ ಬ್ಯಾಂಕ್ ನ ಪ್ರಧಾನ ಕಚೇರಿಗೆ ಕಳ್ಳರು ನುಗ್ಗಿರುವ ಘಟನೆ ದೈಗೋಳಿಯಲ್ಲಿ ನಡೆದಿರುವುದು ರವಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಸಿ.ಸಿ ಟಿ ವಿ ಹಾಗೂ ಸೈರನ್ ನ ಕೇಬಲ್ ತುಂಡರಿಸಿದ ಸ್ಥಿತಿಯಲ್ಲಿದೆ. ಕಡತಗಳನ್ನು ಚೆಲ್ಲಾಪಿಲ್ಲಿಗೊಳಿಸಲಾಗಿದೆ. ಆದರೆ ಬ್ಯಾಂಕ್ ನ ಲಾಕರನ್ನು ಮುರಿಯಲು ಕಳ್ಳರಿಗೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಮಂಜೇಶ್ವರ ಠಾಣಾ ಪೊಲೀಸರಿಗೆ ಬ್ಯಾಂಕ್ ಆಡಳಿತ ಮಂಡಳಿ ಅಧಿಕಾರಿಗಳು ದೂರು ನೀಡಿದ್ದು, ಸ್ಟಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Next Story