ದೇಶದ ಅಭಿವೃದ್ಧಿಗೆ ಇನ್ನಷ್ಟು ಶೈಕ್ಷಣಿಕ ಸಂಸ್ಥೆಗಳು ಬೆಳೆದು ಬರಬೇಕು: ಸ್ಪೀಕರ್ ಯುಟಿ ಖಾದರ್
ಪಯ್ಯನ್ನೂರು: ರಾಷ್ಟ್ರದ ಪ್ರಗತಿಗೆ ಮತ್ತು ಸಾಮಾಜಿಕ ಉನ್ನತಿಗೆ ಇನ್ನಷ್ಟು ಶೈಕ್ಷಣಿಕ ಸಂಸ್ಥೆಗಳು ಬೆಳೆದು ಬರಬೇಕೆಂದು, ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ಅಭಿಪ್ರಾಯಪಟ್ಟರು.
ಅಕ್ಟೋಬರ್ 16, 17, 18 ರಂದು ಕೇರಳದ ಎಟ್ಟಿಕ್ಕುಳಂ ನಲ್ಲಿ ನಡೆಯಲಿರುವ ತಾಜುಲ್ ಉಲಮಾ ಉರೂಸ್ ಪ್ರಯುಕ್ತ ಎಟ್ಟಿಕುಳಂ ನಲ್ಲಿ ನಡೆದ ಘೋಷಣಾ ಸಮಾವೇಶದಲ್ಲಿ, ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಾಜುಲ್ ಉಲಮಾ ರವರು ಹೆಸರು ಸೂಚಿಸುವಂತೆ ವಿದ್ವಾಂಸರ ಕಿರೀಟವಾಗಿದ್ದರು. ಅವರ ಆರು ದಶಕಗಳ ಧೀಮಂತ ನಾಯಕತ್ವವು ಕರ್ನಾಟಕ ಮತ್ತು ಕೇರಳದಲ್ಲಿ ಸಾವಿರಾರು ವಿದ್ವಾಂಸರನ್ನು ಮತ್ತು ಹಲವಾರು ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕಿತು. ಮರಣದ ನಂತರವೂ ಅವರ ವಿದ್ಯೆಯ ಪ್ರಭಾ ಕಿರಣಗಳು ಪಸರಿಸುತ್ತಿದೆ.
ಎಟ್ಟಿಕ್ಕುಳಂ ನಲ್ಲಿ ತಾಜುಲ್ ಉಲಮಾ ದರ್ಗಾ ಸಮಿತಿ ಯ ಅಧೀನದಲ್ಲಿ ಬೆಳೆದು ಬರುತ್ತಿರುವ ವಿದ್ಯಾ ಸಂಸ್ಥೆಗಳು ಬಲು ದೊಡ್ಡ ನಿರೀಕ್ಷೆಯನ್ನು ತಂದಿದೆ.
ತಾಜುಲ್ ಉಲಮಾ ನವೋತ್ಥಾನ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ವ ವಿಧ ಸಹಾಯ ಮಾಡುವುದಾಗಿ, ಯು. ಟಿ. ಖಾದರ್ ಘೋಷಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಳ್ಳಾಲ ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿ ರವರು ಶಾಸಕರಾಗಿ ಆಯ್ಕೆಯಾದ ಯು.ಟಿ.ಖಾದರ್ ರವರು ಇವತ್ತು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ತಾಜುಲ್ ಉಲಮಾ ರವರ ಮತ್ತು ಅವರ ಸುಪುತ್ರರಾದ ಕೋಯಮ್ಮ ತಂಗಳ್ ರವರ ಆಶೀರ್ವಾದವು ಕಾರಣವಾಗಿತ್ತು ಎಂದರು
ಸಯ್ಯಿದ್ ಹಾಮಿದ್ ಇಂಬಿಚ್ಚಿ ಕೋಯ ತಂಙಳ್ ಅಲ್ ಬುಖಾರಿ ಮಖಾಂ ಝಿಯಾರತ್ ಗೆ ನೇತೃತ್ವ ವಹಿಸಿದರು.
ಪಟ್ಟುವಂ ಕೆ. ಪಿ. ಅಬೂಬಕರ್ ಮುಸ್ಲಿಯಾರ್ ರ ಅಧ್ಯಕ್ಷತೆ ವಹಿಸಿದ ಸಮಾರಂಭವನ್ನು ಅಬ್ದುಲ್ ಖಾದಿರ್ ಮದನಿ ಕಲ್ತರ (ಎರಣಾಂಕುಳಂ) ಉದ್ಘಾಟಿಸಿದರು. ಸಯ್ಯಿದ್ ಅಶ್ರಫ್ ತಂಙಳ್ ಆದೂರು ಪ್ರಾರಂಭ ಪ್ರಾರ್ಥನೆ ನಿರ್ವಹಿಸಿದರು.
ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೊನೆಯಲ್ಲಿ ಪ್ರಾರ್ಥನೆ ನಡೆಸಿದರು. ಸಯ್ಯಿದ್ ಜುನೈದ್ ಅಲ್ ಬುಖಾರಿ, ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್, ಸಯ್ಯಿದ್ ಮಸ್ಊದ್ ಅಲ್ ಬುಖಾರಿ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಪರಿಯಾರಂ,ಬಾದುಶಾ ಸಖಾಫಿ ಆಲಪ್ಪುಝ, ಎಂ. ಕೆ. ದಾರಿಮಿ, ಮೂಸಲ್ ಮದನಿ ತಲಕ್ಕಿ, ಯೂಸುಫ್ ಹಾಜಿ ಪೆರುವಂಬ ,ಅಬ್ದುಲ್ ರಹ್ಮಾನ್ ಸುಳ್ಯ, ಬಿ. ಎ. ಅಲಿ ಮೊಗ್ರಾಲ್ ಮುಂತಾದವರು ಭಾಗವಹಿಸಿದರು.
ಅಬ್ದುಲ್ ಸಮದ್ ಅಮಾನಿ ಪಟ್ಟುವಂ ಮತ್ತು ಕೆ. ಪಿ. ಅನಸ್ ಅಮಾನಿ ಬುರ್ದ ಆಲಾಪಿಸಿದರು.
ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ ಸ್ವಾಗತಿಸಿ, ಬಶೀರ್ ಮದನಿ ನೀಲಗಿರಿ ಧನ್ಯವಾದಗೈದರು.