ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನಕ್ಕೆ ಸಚಿವ ಶಿವರಾಜ್ ತಂಗಡಗಿ ಭೇಟಿ
ಕಾಸರಗೋಡು, ಜ.27: ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಜ.24ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನಕ್ಕೆ ಭೇಟಿ ನೀಡಿದರು.
ಸಾಂಸ್ಕೃತಿಗೆ ಭವನದ ಲೈಬ್ರರಿ, ಮ್ಯೂಸಿಯಂ, ಮರೆಯಲಾಗದ ಮಹಾನುಭಾವರು ಫೋಟೋ ಅನಾವರಣ ಇತ್ಯಾದಿಗಳನ್ನು ವೀಕ್ಷಿಸಿದ ಸಚಿವ ಶಿವರಾಜ್ ತಂಗಡಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗಡಿನಾಡು ಕಾಸರಗೋಡಿನ ಗ್ರಾಮೀಣ ಪ್ರದೇಶವಾದ ಸಿರಿಬಾಗಿಲಿನಲ್ಲಿ ಇಂತಹ ಯೋಜನೆ ಸಂಕಲ್ಪಿಸಿ ಯಶಸ್ವಿಗೊಳಿಸುತ್ತಿರುವ ಪ್ರತಿಷ್ಠಾನಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ಹಂತದಲ್ಲಿ ಕರ್ನಾಟಕ ಸರಕಾರವು ಸಹಕರಿಸುವ ಭರವಸೆ ಇತ್ತರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ, ಸುಮಿತ್ರಾ ಮಯ್ಯ ಹಾಗೂ ಖಜಾಂಚಿ ಲಕ್ಷ್ಮೀನಾರಾಯಣ ತಂತ್ರಿ, ಜಗದೀಶ ಕೂಡ್ಲು, ಶಾಮ್ ಕುಂಚಿನಡ್ಕ ಶ್ರೀಮುಖ ಮಯ್ಯ ಪ್ರತಿಷ್ಠಾನದ ಸದಸ್ಯರು ಸಚಿವರನ್ನು ಸ್ವಾಗತಿಸಿ ಬರಮಾಡಿಕೊಂಡರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕರ್ನಾಟಕದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕಾಸರಗೋಡಿನ ವಿಶ್ರಾಂತ ಪ್ರೊಫೆಸರ್ ಶ್ರೀನಾಥ್ ಕಾಸರಗೋಡು ಮತ್ತಿತರರು ಸಚಿವರ ಜೊತೆಗಿದ್ದರು.