ಅಕ್ರಮ ಭೂಸ್ವಾಧೀನ ಪಡಿಸಿದವರಿಂದ ವಶಕ್ಕೆ ಪಡೆದು ಭೂರಹಿತರಿಗೆ ವಿತರಿಸಲಾಗುವುದು: ಸಚಿವ ಕೆ. ರಾಜನ್
ಮಂಜೇಶ್ವರ : ಅಕ್ರಮ ಭೂಸ್ವಾಧೀನ ಪಡಿಸಿದವರಿಂದ ವಶಕ್ಕೆ ಪಡೆದು ಭೂರಹಿತರಿಗೆ ವಿತರಿಸಲಾಗುವುದು ಎಂದು ಕೇರಳ ಕಂದಾಯ ಹಾಗೂ ವಸತಿ ಸಚಿವ ಕೆ. ರಾಜನ್ ಹೇಳಿದರು.
ಅವರು ಮಂಜೇಶ್ವರ ತಾಲೂಕಿನ ಎಡನಾಡು ಸ್ಮಾರ್ಟ್ ಗ್ರೂಫ್ ಗ್ರಾಮ ಕಚೇರಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲರಿಗೂ ಭೂಮಿ, ಭೂ ರಹಿತ ರಿಲ್ಲದ ರಾಜ್ಯ ಸರಕಾರದ ಗುರಿಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 35 ಗ್ರಾಮ ಕಚೇರಿಗಳು ಸ್ಮಾರ್ಟ್ ಆಗಿ ಪರಿವರ್ತನೆ ಗೊಳ್ಳ ಲಿದೆ.ಎಲ್ಲರಿಗೂ ಭೂಮಿ, ಎಲ್ಲರಿಗೂ ಹಕ್ಕು ಪತ್ರ, ಎಲ್ಲಾ ಸೇವೆ ಸ್ಮಾರ್ಟ್ ಗೊಳಿಸಲಾಗುವುದು ಕಂದಾಯ ಇಲಾಖೆಯ ಯೋಜನೆಯಾಗಿದೆ. ಕಂದಾಯ ಇಲಾಖೆ ಆಧುನಿಕ ರೀತಿಯಲ್ಲಿ ಜನರ ಕೈಗೆ ತಲ ಪಿಸುವ ಯೋಜನೆ ಹೊಂದಿದೆ ಎಂದು ಸಚಿವರು ಹೇಳಿದರು.
ಕಳೆದ ಎರಡು ವರ್ಷ ದಲ್ಲಿ ಎರಡೂ ಲಕ್ಷಕ್ಕೂ ಅಧಿಕ ಹಕ್ಕು ಪತ್ರ ಗಳನ್ನು ನೀಡಲಾಗಿದೆ.30 ಸಾವಿರ ಹಕ್ಕು ಪತ್ರ ಗಳು ವಿತರಿಸಲು ಸಜ್ಜು ಗೊಳಿಸಲಾಗಿದೆ. ಫೆಬ್ರವರಿ ತಿಂಗಳೊಳಗೆ ಒಂದೂವರೆ ಲಕ್ಷ ದಷ್ಟು ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದರು. ಶಾಸಕ ಎ..ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ ಶಿಲಾ ಫಲಕ ಅನಾವರಣ ಗೊಳಿಸಿದರು. ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್, ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂಚಾಯತ್ ಸದಸ್ಯೆ ಎಂ. ಚಂದ್ರಾವತಿ, ಪುತ್ತಿಗೆ ಪಂಚಾಯತ್ ಸದಸ್ಯ ಅನಿತಾ , ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಪ್ರದೀಪ್ ಕುಮಾರ್ , ಕೃಷ್ಣ ಆಳ್ವ, ಸುಲೈಮಾನ್ , ಪಿ.ಅಬ್ದುಲ್ಲಾ, ರಾಘವ ಚೇರಾಲ್ , ಹಮೀದ್ ಕಾಸ್ ಮಸ್, ಉದಯ ರಾಜ್, ಮನೋಜ್ ಕುಮಾರ್, ಸಿದ್ದೀಕ್ ಕೊಡ್ಯ ಮ್ಮೆ, ಪ್ರವೀಣ್ ಕುಂಬಳೆ,ಅಹಮ್ಮದ್ ಅಲಿ,ತಾಜುದ್ದೀನ್, ಜಯಂತ ಪಾಟಾಳಿ, ಅಝೀಝ್ ಬೇರಿಕೆ ಮೊದಲಾದವರು ಉಪಸ್ಥಿತರಿದ್ದರು.
ಯೋಜನಾಧಿಕಾರಿ ಪಿ.ಆರ್ ಸುಂದರೇಶನ್ ವರದಿ ಓದಿದರು.ಭೂ ಕಂದಾಯ ಆಯುಕ್ತ ಡಾ. ಎ. ಕೌಶಿಗನ್ ಸ್ವಾಗತಿಸಿ, ಎಡಿಎಂ ಕೆ.ವಿ ಶ್ರುತಿ ವಂದಿಸಿದರು.