ಕಾಸರಗೋಡು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್‌ಗೆ ಗೆಲುವು
ಕಾಸರಗೋಡು : ಕಾಸರಗೋಡು ಲೋಕಸಭಾ ಕ್ಷೇತ್ರವೂ ಎರಡನೇ ಬಾರಿಗೆ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಸಿಪಿಐಎಂ ಅಭ್ಯರ್ಥಿ ಎಂ.ವಿ ಬಾಲಕೃಷ್ಣನ್ ರನ್ನು 100649 ಮತಗಳ ಅಂತರ ದಿಂದ ಸೋಲಿಸಿದರು.
ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ. ಎಲ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಕಾಂಗ್ರೆಸ್ ನ ರಾಜ್ ಮೋಹನ್ ಉಣ್ಣಿ ತ್ತಾನ್ 4,90,659 ಮತ, ಸಿಪಿಐಎಂ ನ ಎಂ. ವಿ ಬಾಲಕೃಷ್ಣನ್ 3,90,010 ಮತಗಳನ್ನು ಪಡೆದರೆ ತೃತೀಯ ಸ್ಥಾನ ಪಡೆದ ಬಿಜೆಪಿಯ ಅಶ್ವಿನಿ ಎಂ.ಎಲ್ 2,19,558 ಮತಗಳನ್ನು ಪಡೆದರು.
ಬಿಎಸ್ಪಿ ಯಿಂದ ಸ್ಪರ್ದಿಸಿದ್ದ ಸುಕುಮಾರಿ ಎಂ 1612 , ಅನಿಶ್ ಪಯ್ಯನ್ನೂರು 759, ರಾಜೇಶ್ವರಿ 897 , ಮನೋಹರನ್ ಕೆ. 804 , ಬಾಲಕೃಷ್ಣನ್ ಎನ್ . 628, ಎನ್ . ಕೇಶವ ನಾಯ್ಕ್ 507 ಮತಗಳನ್ನು ಪಡೆದರೆ ನೋಟಾ7112 ಮತಗಳನ್ನು ಪಡೆದಿವೆ.
ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದ್ದ ಬಾಲಕೃಷ್ಣನ್ ಬಳಿಕ ಇವಿಎಂ ಮತ ಎಣಿಕೆ ಯುದ್ದಕ್ಕೂ ಹಿನ್ನಡೆಯಾಗಿ ಉಳಿದರು. ಕಳೆದ ಬಾರಿ 40, 438 ಮತಗಳ ಅಂತರ ದಿಂದ ಗೆಲುವು ಸಾಧಿಸಿದ್ದ ಉಣ್ಣಿ ತ್ತಾನ್ ಈ ಬಾರಿ ಗೆಲುವಿನ ಅಂತರ ದ್ವಿಗುಣ ಗೊಳಿಸಿದರು. ಸಿಪಿಐಎಂ ಕೇಂದ್ರಗಳಲ್ಲೂ ಉಣ್ಣಿತ್ತಾ ನ್ ಮುನ್ನಡೆ ಸಾಧಿಸಿದ್ದಾರೆ.
ಪೆರಿಯದ ಕೇಂದ್ರ ವಿಶ್ವ ವಿದ್ಯಾನಿಲಯದ ಕೇಂದ್ರದಲ್ಲಿ ಮತ ಎಣಿಕೆ ನಡೆಯಿತು. ಏಪ್ರಿಲ್ 26 ರಂದು ನಡೆದ ಚುನಾವಣೆಯಲ್ಲಿ 76. 5 ಶೇಕಡಾ ಮತದಾನವಾಗಿತ್ತು. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡರೂ ರಾತ್ರಿ 8 ಗಂಟೆ ತನಕ ನಡೆಯಿತು.
ಮತ ಪಡೆದವರ ವಿವರ
1. ರಾಜ್ ಮೋಹನ್ ಉಣ್ಣಿ ತ್ತಾನ್ ( ಕಾಂಗ್ರೆಸ್ ) 4,90,659
2. ಎಂ. ವಿ ಬಾಲಕೃಷ್ಣನ್ ( ಸಿಪಿಐಎಂ ) 3,90,010
3. ಅಶ್ವಿನಿ ಎಂ. ಎಲ್ (ಬಿಜೆಪಿ) 2,19, 558
4. ಸುಕುಮಾರಿ ಎಂ. ( ಬಿ ಎಸ್ಪಿ ) 1,612
5 . ಅನಿಶ್ ಪಯ್ಯನ್ನೂರು ( ಪಕ್ಷೇತರ ) 759
6 ಬಾಲಕೃಷ್ಣ ಎನ್ . ( ಪಕ್ಷೇತರ ) 628
7. ಮನೋಹರನ್ ಕೆ. ( ಪಕ್ಷೇತರ ) 804
8. ಎನ್ . ಕೇಶವ ನಾಯಕ್ ( ಪಕ್ಷೇತರ ) 507
9. ರಾಜೇಶ್ವರಿ ( ಪಕ್ಷೇತರ ) 897
10 ನೋಟಾ 7112
ಬಹುಮತದ ಅಂತರ - 1,00,649