ಕಲ್ಲಿಕೋಟೆ: ಗುಲ್ಝಾರೇ ನಅತ್ ಪ್ರೊಫೇಟಿಕ್ ಸೆಮಿನಾರ್
ಕಲ್ಲಿಕೋಟೆ, ಅ.13: ಮರ್ಕಝುಸ್ಸಖಾಫತುನ್ನಿಯಾದ ಕನ್ನಡ ವಿದ್ಯಾರ್ಥಿ ಸಂಘಟನೆ (ಕೆಎಸ್ಒ)ಯು ಹಮ್ಮಿಕೊಂಡ ಗುಲ್ಝಾರೇ ನಅತ್ ಪ್ರೊಫೇಟಿಕ್ ಸೆಮಿನಾರ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕೇರಳ ಹಜ್ ಕಮಿಟಿ ಅಧ್ಯಕ್ಷ ಸಿ.ಮುಹಮ್ಮದ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಎಸ್ಒ ಅಧ್ಯಕ್ಷ ಸೈಯದ್ ಫಝಲ್ ಕೊಡಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮರ್ಕಝ್ ಶರೀಅತ್ ಕಾಲೇಜಿನ ಪ್ರಧಾನ ಮುದರ್ರಿಸ್ ಅಬ್ದುಲ್ಲಾ ಸಖಾಫಿ ಮಲಯಮ್ಮ ಶುಭ ಹಾರೈಸಿದರು.
'ದಕ್ಷಿಣ ಭಾರತದ ಪೈಗಂಬರ್ ಕಾವ್ಯದ ಸಾರ; ಸಾಹಿತ್ಯಿಕ ವಿಶ್ಲೇಷಣೆ, ಪ್ರಭಾವ ಮತ್ತು ಬೋಧನೆಗಳು’ ಎಂಬ ವಿಷಯದಲ್ಲಿ ಕರ್ನಾಟಕ ಮತ್ತು ಕೇರಳದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಿಚಾರ ಮಂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಲೇಖಕ ಇಸ್ಮತ್ ಪಜೀರ್, ಮರ್ಕಝ್ ಹಳೆ ವಿದ್ಯಾರ್ಥಿ ಸಲೀಂ ಮುಈನಿ ಇರುವಂಬಳ್ಳ ಭಾಗವಹಿಸಿದ್ದರು.
ತಸ್ಲೀಂ ನೂರಾನಿ ಸ್ವಾಗತಿಸಿದರು. ಸ್ವಬಾಹ್ ಬೆಳ್ಳಾರೆ ವಂದಿಸಿದರು.
Next Story