ಕಾಸರಗೋಡು: ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತ್ಯು
ಕಾಸರಗೋಡು : ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ನಗರದ ತೆರುವತ್ ನಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಬಾಗಲಕೋಟೆಯ ಪ್ರಮೋದ್ (27) ಮೃತ ಪಟ್ಟವರು. ತಳಂಗರೆ ತೆರುವತ್ ನಲ್ಲಿ ವಿವಾಹ ಮನೆಯ ಚಪ್ಪರ ತೆಗೆಯುತ್ತಿ ದ್ದಾಗ ಚಪ್ಪರದ ಕಂಬ ವಿದ್ಯುತ್ ತಂತಿಗೆ ತಗಲಿ ಈ ಘಟನೆ ನಡೆದಿದೆ. ಸಮೀಪದಲ್ಲೇ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ಈ ಅವಘಡ ನಡೆದಿದೆ.
ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Next Story