ಕಾಸರಗೋಡು: ರೈಲಿನಿಂದ ಬಿದ್ದು ಪ್ರಯಾಣಿಕ ಮೃತ್ಯು
ಕಾಸರಗೋಡು: ರೈಲಿನಿಂದ ಬಿದ್ದು ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ನೆಲ್ಲಿಕುಂಜೆಯಲ್ಲಿ ನಡೆದಿದೆ.
ಸಿರಿಬಾಗಿಲು, ಕಜೆ ಕೈಲಾಸ್ ಕೃಪಾದ ತಿಲಕ್ ಆಳ್ವ (39) ಮೃತಪಟ್ಟ ವ್ಯಕ್ತಿ. ಇವರ ಮೃತದೇಹವು ನೆಲ್ಲಿಕುಂಜೆ ಸೇತುವೆಯ ಬಳಿ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದರು. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಅವಿವಾಹಿತರಾದ ತಿಲಕ್ ಆಳ್ವ ಅವರು ತಂದೆ, ತಾಯಿ, ಸಹೋದರಿಯರನ್ನು ಅಗಲಿದ್ದಾರೆ. ರೈಲಿನಿಂದ ಅಕಸ್ಮಿಕ ವಾಗಿ ಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
Next Story