ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ನೀಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಕನ್ನಡ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಶ್ರೇಷ್ಠ ತನಿಖಾತ್ಮಕ ವರದಿ, ಸಾಮಾಜಿಕ ಸ್ಪಂದನದ ವರದಿ, ಸಾಹಸ ವರದಿ, ಜನಪರ ಕಾಳಜಿಯ ವರದಿ, ಸಾಮಾಜಿಕ ಅನಾಚಾರ ವಿರುದ್ಧ ವರದಿ, ಇವಲ್ಲದೆ ಶ್ರೇಷ್ಠ ಫೋಟೋ ಜರ್ನಲಿಸ್ಟ್, ಪತ್ರಿಕಾ ರಂಗದ ಧಾರ್ಮಿಕ ಕೊಡುಗೆ, ಪತ್ರಿಕಾ ರಂಗದ ಒಟ್ಟು ಸಾಧನೆ ಎಂಬೀ ವಿಭಾಗಗಳಲ್ಲಿ ಒಟ್ಟು 12 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ವರದಿಯು 2024ರ ಜನವರಿ ಒಂದರಿಂದ ಡಿಸೆಂಬರ್ 31ರ ಒಳಗೆ ದಿನ, ವಾರ ಅಥವಾ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು. ಸ್ಮರಣ ಸಂಚಿಕೆ ಬರಹಗಳು ಪರಿಗಣಿಸಲ್ಪಡುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.
ಪ್ರಶಸ್ತಿಯು ಪ್ರತೀ ವಿಭಾಗದಲ್ಲಿ 10,000 ರೂ. ನಗದು, ಪ್ರಶಸ್ತಿ ಪತ್ರ, ಫಲಕಗಳನ್ನು ಒಳಗೊಂಡಿರುತ್ತವೆ.
ಅರ್ಹ ಪತ್ರಕರ್ತರು ಫೆಬ್ರವರಿ 28ರ ಒಳಗೆ ತಮ್ಮ ಪೂರ್ಣ ಮಾಹಿತಿ, ಲೇಖನ ಬರಹಗಳನ್ನು ಒಳಗೊಂಡು ಅರ್ಜಿ ಸಲ್ಲಿಸಬಹುದು. ಎಪ್ರಿಲ್ ನಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ಜರಗಲಿದೆ.
ಅರ್ಜಿ ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಬಿ.ಕೆ. ಟವರ್ಸ್, ಸುಬ್ಬಯ್ಯಕಟ್ಟೆ, ಅಂಚೆ: ಕುಡಾಲುಮೇರ್ಕಳ, ಕಾಸರಗೋಡು ಜಿಲ್ಲೆ.671324. ಹೆಚ್ಚಿನ ಮಾಹಿತಿಗೆ ವಾಟ್ಸ್ ಆ್ಯಪ್ ಸಂಖ್ಯೆ: 9446395295, 9995945394 ಇ-ಮೇಲ್: subbayakattear@gmail.comಗೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.