ಕಾಸರಗೋಡು: ಬಾವಿ ಕೆಲಸದ ವೇಳೆ ಮಣ್ಣು ಜರಿದು ಬಿದ್ದು ಕಾರ್ಮಿಕ ಮೃತ

ಮುಹಮ್ಮದ್ ಹಾರಿಸ್
ಕಾಸರಗೋಡು: ಬಾವಿ ಕೆಲಸದ ನಡುವೆ ಮಣ್ಣು ಜರಿದು ಬಿದ್ದು ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಬೇಕಲ ಠಾಣಾ ವ್ಯಾಪ್ತಿಯ ಚೆಂಬರಿಕದಲ್ಲಿ ನಡೆದಿದೆ. ಜತೆಗಿದ್ದ ಇನ್ನೊರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಚೆಂಬರಿಕ ನಿವಾಸಿ ಮುಹಮ್ಮದ್ ಹಾರಿಸ್(41) ಎಂದು ಗುರುತಿಸಲಾಗಿದೆ. ಇವರ ಜತೆಗಿದ್ದ ಕಾರ್ಮಿಕ ಪ್ರದೀಪ್ ಗಂಭೀರ ಗಾಯಗೊಂಡಿದ್ದು ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಮುಹಮ್ಮದ್ ಹಾರೀಸ್ ರ ಸಹೋದರ ಮುಹಮ್ಮದ್ ಕುಂಞೆ ಅಪಾಯದಿಂದ ಪಾರಾಗಿದ್ದಾರೆ.
ಚೆಂಬರಿಕಾದಲ್ಲಿ ಖಾಸಗಿ ವ್ಯಕ್ತಿಯ ಹಿತ್ತಲಿನಲ್ಲಿ ಬಾವಿ ತೋಡುತ್ತಿದ್ದಂತೆಯೇ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ನಾಗರಿಕರು ಇಬ್ಬರನ್ನು ಮೇಲೆತ್ತಿ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮುಹಮ್ಮದ್ ಹಾರಿಸ್ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story