ಸಿರಿಬಾಗಿಲು ಪ್ರತಿಷ್ಠಾನಕ್ಕೆ ಪಂಜ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಗೌರವ
ಕಾಸರಗೋಡು: ಸಿರಿಬಾಗಿಲುವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೆ ಸುಳ್ಯ ತಾಲೂಕಿನ ಪಂಜದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಗೌರವಿಸಲಾಯಿತು.
ಗಡಿನಾಡು ಕಾಸರಗೋಡಿನಲ್ಲಿ ಸಾಂಸ್ಕೃತಿಕ ಭವನದ ಮೂಲಕ ,ಕನ್ನಡ- ಸಂಸ್ಕೃತಿ- ಸಾಹಿತ್ಯ- ಕಲೆಯ ಸಮಗ್ರ ಅಧ್ಯಯನಕ್ಕೆ ವಿವಿಧ ಅಧ್ಯಯನ ಯೋಗ್ಯ ಚಟುವಟಿಕೆ ನಡೆಸುತ್ತಿರುವ ಪ್ರತಿಷ್ಠಾನವು, ಭವನದಲ್ಲಿ ತೆಂಕುತಿಟ್ಟು ಯಕ್ಷಗಾನ ಮ್ಯೂಸಿಯಂ- ಪುಸ್ತಕ ಭಂಡಾರ- ಪುಸ್ತಕ ಪ್ರಕಾಶ -ಕೀರ್ತಿಶೇಷ ಕಲಾವಿದರ ಭಾವಚಿತ್ರ ಅನಾವರಣ ಮುಂತಾದ ಯೋಜನೆ ಹಮ್ಮಿಕೊಂಡು ಯಶಸ್ವಿಯಾಗಿದೆ.
ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಡಾಕ್ಟರ್ ಅನಿಲ್ ಕುದುಮಾರುಬೆಟ್ಟು ಅವರು ಪ್ರತಿಷ್ಠಾನಕ್ಕೆ ಗೌರವಫಲಕನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮೇಳದ ಪ್ರಬಂಧಕರಾದ ಶ್ರೀ ಬಿ. ಯನ್. ಗಿರೀಶ ಹೆಗ್ಡೆ ಯವರು ಅಭಿನಂದನಾ ಭಾಷಣ ಮಾಡಿದರು.
ಧರ್ಮಸ್ಥಳ ಮೇಳದ ವರಿಂದ ಕಾರುಣ್ಯಾಂಬುಧಿ ಶ್ರೀ ರಾಮ ಯಕ್ಷಗಾನ ಬಯಲಾಟ ನಡೆಯಿತು.
ಕಲಾಭಿಮಾನಿಗಳಾದ ಡಾ. ಸತ್ಯನಾರಾಯಣ ಕಾವು, ವಿಜಯ ಭಟ್ ಪಂಜ ಉಪಸ್ಥಿತರಿದ್ದರು. ಶ್ರೀ ಜಯರಾಮ ಕಲ್ಲಂಜೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.