ಕನ್ನಡ ಸಾಹಿತ್ಯ, ಕಲೆಗಳ ಉಳಿವಿಗೆ ಸರಕಾರೇತರ ಸಂಘಸಂಸ್ಥೆಗಳ ಕೊಡುಗೆ ಅಪಾರ: ಪುರುಷೋತ್ತಮ ಬಿಳಿಮಲೆ
ಕಾಸರಗೋಡು: ಕನ್ನಡ ಸಾಹಿತ್ಯ - ಸಂಸ್ಕೃತಿ- ಕಲೆ ಯಕ್ಷಗಾನ ಇತ್ಯಾದಿಗಳ ಉಳಿವಿಗಾಗಿ ಸರಕಾರೇತರ ಸಂಘಸಂಸ್ಥೆಗಳ ಕೊಡುಗೆಗಳು ಅಪಾರ ಎಂದು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಶಿಬಿರಕ್ಕೆ ಆಗಮಿಸಿದ್ದ ಡಾ.ಬಿಳಿಮಲೆ ಮಾತನಾಡಿ, ಗಡಿನಾಡು ಕಾಸರಗೋಡಿನಲ್ಲಿ ಯಕ್ಷಗಾನ ಹಾಗೂ ಸಾಹಿತ್ಯಕ್ಕಾಗಿ ಸಿರಿಬಾಗಿಲು ಪ್ರತಿಷ್ಠಾನವು ನೀಡುತ್ತಿರುವ ಕೊಡುಗೆಗಳು ಗಮನಾರ್ಹ. ಪ್ರತಿಷ್ಠಾನಕ್ಕೆ ಯಾವುದಾದರೂ ಕಂಪೆನಿಗಳ ಸಿ.ಎಸ್.ಆರ್. ಫಂಡ್ ಒದಗಿಸಲು ಸಹಕರಿಸುವುದಾಗಿ ಭರವಸೆ ನೀಡಿದರು.
ಅತಿಥಿಗಳಾಗಿ ಜಾನಪದ ಸಂಶೋಧಕ ಡಾ.ಸುಂದರ ಕೇಣಾಜೆ, ಗಮಕ ಪರಿಷತ್ ಅಧ್ಯಕ್ಷ ತೆಕ್ಕೆಕ್ಕೆರೆ ಶಂಕರ್ ನಾರಾಯಣ ಭಟ್ ಮತ್ತಿತರರ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.
Next Story