ಮಡಿಕೇರಿ | ಕಾಡುಕೋಣ ಬೇಟೆ : ಓರ್ವನ ಬಂಧನ
ಮಡಿಕೇರಿ : ಭಾರೀ ಗಾತ್ರದ ಕಾಡುಕೋಣವನ್ನು ಬೇಟೆಯಾಡಿ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿರುವುದು ವರದಿಯಾಗಿದೆ.
ಎಮ್ಮೆಮಾಡು ಗ್ರಾಮದ ನಿವಾಸಿ ಹಾರಿಸ್(42) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಬಂಧಿತ ವ್ಯಕ್ತಿಯಿಂದ ಸುಮಾರು 549 ಕೆ.ಜಿ.ಕಾಡುಕೋಣದ ಮಾಂಸ, ಎರಡು ಕತ್ತಿ ಹಾಗೂ ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸಮೀಪದ ನಂದಿಮೊಟ್ಟೆ ಎಂಬಲ್ಲಿ ಕಾಡುಕೋಣವನ್ನು ಬೇಟೆಯಾಡಲಾಗಿದೆ ಎನ್ನಲಾಗಿದ್ದು, ಇದರ ಮಾಂಸವನ್ನು ವಾಹನದ ಮೂಲಕ ಸಾಗಾಟ ಮಾಡುವ ಸಂದರ್ಭ, ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡ ವಾಹನವನ್ನು ಬೆನ್ನಟ್ಟಿ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಂತದಲ್ಲಿ ಹಾರಿಸ್ನೊಂದಿಗೆ ಇದ್ದ ಮತ್ತೊಬ್ಬ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಎಫ್ಓ ಭಾಸ್ಕರ್, ಎಸಿಎಫ್ ಮೊಹಿಸಿನ್ ಬಾಷ, ಆರ್ ಎಫ್ಓ ಪೂಜಶ್ರಿ ಸಹಿತ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Next Story