ಎನ್‍ಸಿಸಿ ಕೆಡೆಟ್ ಕೊಡಗಿನ ಕಲ್ಪನಾ ಕುಟ್ಟಪ್ಪ ಗೆ ರಕ್ಷಾ ಮಂತ್ರಿ ಪದಕ
ಮಡಿಕೇರಿ: ಮೈಸೂರಿನ 14 ಕಾರ್‍ಬನ್ ಎನ್‍ಸಿಸಿಗೆ ಸಂಬಂಧಿಸಿದ ಸಿಟಿ ಎನ್‍ಸಿಸಿ ಹಿರಿಯ ಅಧೀನ ಅಧಿಕಾರಿ (ಎಸ್‍ಯುಒ) ಮುಕ್ಕಾಟೀರ ಕಲ್ಪನಾ ಕುಟ್ಟಪ್ಪ ಅವರಿಗೆ ಪ್ರತಿಷ್ಠಿತ ರಕ್ಷಾ ಮಂತ್ರಿ ಪದಕ ನೀಡಿ ಗೌರವಿಸಲಾಗಿದೆ.
ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ಎನ್‍ಸಿಸಿ ಕೆಡೆಟ್ ಆಗಿರುವ ಕಲ್ಪನಾ ಅವರ ವಿಶೇಷ ಪ್ರತಿಭೆಯನ್ನು ಗುರುತಿಸಿ ಸರ್ಕಾರ ಈ ಪ್ರಶಸ್ತಿ ನೀಡಿದೆ.
ಪ್ರಸಕ್ತ ಮೈಸೂರಿನ ಕ್ರಸ್ಟ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕಲ್ಪನಾ ಕುಟ್ಟಪ್ಪ ಮೂಲತ: ಕುಶಾಲನಗರ ಮಾದಾಪಟ್ಟಣ ನಿವಾಸಿ ಪ್ರಸ್ತುತ ಮೈಸೂರಿನಲ್ಲಿರುವ ಮುಕ್ಕಾಟಿರ ರವಿ ಕುಟ್ಟಪ್ಪ ಮತ್ತು ಸ್ವಾತಿ ದಂಪತಿಗಳ ಪುತ್ರಿ.
ಕಲ್ಪನಾ ಕುಟ್ಟಪ್ಪ ಅಂತರರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಕ್ರೀಡಾಪಟುವಾಗಿದ್ದು, ಇದುವರೆಗೆ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 150 ಪದಕಗಳನ್ನು ಗಳಿಸಿದ್ದಾರೆ.
ಇತ್ತೀಚೆಗೆ ಇಟಲಿಯಲ್ಲಿ ನಡೆದ ವರ್ಲ್ಡ್ ಸ್ಕೇಟಿಂಗ್ ಚಾಂಪಿಯನ್‍ಶಿಪ್ ನಲ್ಲಿ, ಸೆಪ್ಟೆಂಬರ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರ ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ
ಎರಡು ಚಿನ್ನ ಒಂದು ಬೆಳ್ಳಿ ಮತ್ತು ಒಂದು ಕಂಚು ಪದಕ ಗಳಿಸುವಲ್ಲಿ ಕಲ್ಪನಾ ಕುಟ್ಟಪ್ಪ ಸಾಧನೆ ಮಾಡಿದ್ದಾರೆ.