ಕೊಡಗು | ಪ್ರಾಣ ಉಳಿಸಿಕೊಳ್ಳಲು ಲಾರಿಯಿಂದ ಹಾರಿದ ಚಾಲಕ ಚಕ್ರದಡಿಗೆ ಸಿಲುಕಿ ಮೃತ್ಯು
ಕೊಡಗು : ನಿಯಂತ್ರಣ ತಪ್ಪಿದ ಲಾರಿಯಿಂದ ಹಾರಿದ ಚಾಲಕರೊಬ್ಬರು ಚಕ್ರದಡಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಶನಿವಾರಸಂತೆ ಸಮೀಪ ಗುಡುಗಳಲೆ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಸುಂಕಣ್ಣ ಮೃತ ಚಾಲಕ. ನಿರ್ವಾಹಕ ನರೇಶ್ ಅಪಾಯದಿಂದ ಪಾರಾಗಿದ್ದಾರೆ.
ಆಂಧ್ರಪ್ರದೇಶದಿಂದ ಸೋಮವಾರಪೇಟೆಗೆ ತೆರಳುತಿದ್ದ ಸಿಮೆಂಟ್ ತುಂಬಿದ ಲಾರಿ ಗುಡುಗಳಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚುವ ಹಂತದಲ್ಲಿತ್ತು. ಅಪಾಯದ ಮುನ್ಸೂಚನೆ ಅರಿತ ಇಬ್ಬರು ಲಾರಿಯಿಂದ ಹಾರಿದ್ದಾರೆ. ಈ ಸಂದರ್ಭ ಲಾರಿಯ ಹಿಂಬದಿಯ ಚಕ್ರ ಸುಂಕಣ್ಣ ಅವರ ಮೇಲೆ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story