ಶನಿವಾರಸಂತೆ | ಇಂದಿನಿಂದ ಗುಡುಗಳಲೆ ಉರೂಸ್ ಸಮಾರಂಭ

ಶನಿವಾರಸಂತೆ: ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ದ ಆಧ್ಯಾತ್ಮಿಕ ಕೇಂದ್ರ ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಹ್ ಅವರ ಹೆಸರಿನಲ್ಲಿ ನಡೆಯುವ ಉರೂಸ್ ಸಮಾರಂಭ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಎ.11, 12 ಮತ್ತು 13ರಂದು ಗುಡುಗಳಲೆಯ ಶಾಫಿ ಬದ್ರಿಯಾ ಜುಮಾ ಮಸೀದಿ ಮತ್ತು ಹಝ್ರತ್ ಫಬೀರ್ ಷಾಹ್ ವಲಿಯುಲ್ಲಾಹ್ ದರ್ಗಾ ಶರೀಫ್ನಲ್ಲಿ ಜರುಗಲಿವೆ.
ಎ.11 ರಂದು ಜುಮಾ ನಮಾಝ್ ಬಳಿಕ ಬದ್ರಿಯ ಜುಮಾ ಮಸ್ಜಿದ್ ಅಧ್ಯಕ್ಷ ಟಿ.ಎ.ಇಸ್ಮಾಯೀಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಖತೀಬ್ ಸೂಫಿ ದಾರಿಮಿ ದುಆಗೈಯುವರು. ರಾತ್ರಿ 8 ಗಂಟೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಖತೀಬ್ ಸೂಫಿ ದಾರಿಮಿ ಉದ್ಘಾಟಿಸಲಿದ್ದಾರೆ. ಟಿ.ಎ.ಇಸ್ಮಾಯೀಲ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಪ್ರವಚನ ಮತ್ತು ದುಆ ಮಜ್ಲಿಸ್ ಗೆ ಲಕ್ಷದ್ವೀಪದ ಅಸ್ಸೈಯದ್ ಝೈನುದ್ದೀನ್ ಸಖಾಫಿ ಅಲ್ ಬುಖಾರಿ ಕೂರಿಕ್ಕುಝಿ ತಂಙಳ್ ನೇತೃತ್ವ ವಹಿಸಲಿದ್ದಾರೆ. ಬದ್ರಿಯ ಜುಮಾ ಮಸೀದಿಯ ಸದರ್ ಮುಅಲ್ಲಿಂ ರಫೀಕ್ ದಾರಿಮಿ ಸ್ವಾಗತಿಸಲಿದ್ದು, ಇತರ ಪ್ರಮುಖರು ಉಪಸ್ಥಿತರಿರುತ್ತಾರೆ.
ಎ.12 ರಂದು ರಾತ್ರಿ 8 ಗಂಟೆಗೆ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯ ಜುಮಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಎಂ.ಮುಸ್ತಫ ವಹಿಸುವರು. ಸದರ್ ಮುಅಲ್ಲಿಂ ಶಖೀರ್ ಬಾಖವಿ ಸ್ವಾಗತಿಸಲಿದ್ದಾರೆ. ಅಸ್ಲಮ್ ಅಝ್ಹರಿ ಪೋತುಮ್ ಕಡವು ಮುಖ್ಯ ಪ್ರವಚನ ನೀಡಲಿದ್ದಾರೆ. ಅಸ್ಸೈಯದ್ ಅಲಿ ತಂಙಳ್ ಕುಂಬೋಳ್ ದುಆ ಮಜ್ಲಿಸ್ ಗೆ ನೇತೃತ್ವ ನೀಡಲಿದ್ದಾರೆ.
ಎ.13 ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮಖಾಂ ಉರೂಸ್ ನಡೆಯಲಿದೆ. ಅಧ್ಯಕ್ಷತೆಯನ್ನು ಬದ್ರಿಯ ಜುಮಾ ಮಸೀದಿ ಉಪಾಧ್ಯಕ್ಷ ಸಿ. ಎಂ.ಅಬ್ದುಲ್ಲಾ ವಹಿಸುವರು. ಸದರ್ ಮುಅಲ್ಲಿಂ ಸಫಾಝ್ ಯಮಾನಿ ಸ್ವಾಗತಿಸಲಿದ್ದಾರೆ.
ಪೂರ್ವಾಹ್ನ 11 ಗಂಟೆಗೆ ಅಸ್ಸೈಯದ್ ಅಲಿ ತಂಙಳ್ ಕುಂಬೋಳ್ ನೇತೃತ್ವದಲ್ಲಿ ದುಆ ಮಜ್ಜಿಸ್ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಗುಡುಗಳಲೆ ಶಾಫಿ ಜುಮಾ ಮಸೀದಿ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.