ಕೋಲಾರ ಪತ್ರಿಕೆಯ ಸ್ಥಾಪಕ ಸಂಪಾದಕ ಕೆ. ಪ್ರಹ್ಲಾದರಾವ್ ಅವರ 83ನೇ ಜನ್ಮ ದಿನಾಚರಣೆ
ಪತ್ರಿಕೆಯ ಸುವರ್ಣ ಸಂಭ್ರಮ ವರ್ಷಾಚರಣೆ

ಕೋಲಾರ, ಜ.30: ಕೋಲಾರ ಪತ್ರಿಕೆಯ ಸ್ಥಾಪಕ ಸಂಪಾದಕ ಕೆ. ಪ್ರಹ್ಲಾದರಾವ್‌ರ 83ನೇ ಜನ್ಮದಿನವನ್ನು ಪತ್ರಿಕೆಯ ಐವತ್ತನೇ ವರ್ಷದ ಸಂಭ್ರಮದೊಂದಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಂತರಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಬುಧವಾರ ಆಚರಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪತ್ರಿಕೆಯ ಪ್ರಕಾಶಕಿ ಶ್ರೀವಾಣಿ ಪ್ರಹ್ಲಾದರಾವ್, ಸಂಪಾದಕ ಸುಹಾಸ್ ಪ್ರಹ್ಲಾದರಾವ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್. ಗಣೇಶ್, ಜಿಲ್ಲಾ ಉಪಾಧ್ಯಕ್ಷ ಮತ್ತು ಕೋಲಾರ ಪತ್ರಿಕೆಯ ಟೇಕಲ್ ವರದಿಗಾರ ಎಸ್. ಲಕ್ಷ್ಮೀಶ್, ಪತ್ರಿಕೆಯ ಅಭಿಮಾನಿ ಓದುಗರಾದ ವಕೀಲ ಮಹ್ಮದ್ ಉಸ್ಮಾನ್ ಜಾಕಿರ್, ನಿವೃತ್ತ ಶಿಕ್ಷಕ ಸುಲೇಮಾನ್ ಖಾನ್ ಅವರು ಮಾತನಾಡಿದರು.
ಜಿಲ್ಲೆಯ ಪ್ರಥಮ ಕನ್ನದ ದಿನಪತ್ರಿಕೆಯಾಗಿ ಆರಂಭಗೊಂಡು ಐವತ್ತನೇ ವರ್ಷಕ್ಕೆ ಕಾಲಿರಿಸಿರುವ ಪತ್ರಿಕೆಯ ಸುವರ್ಣ ಸಂಭ್ರಮ ವರ್ಷಾಚರಣೆಯ ಸವಿನೆನಪಿನಲ್ಲಿ ಕೋಲಾರ ಪತ್ರಿಕೆ ಸಂಪಾದಕ ಸುಹಾಸ್, ಪ್ರಕಾಶಕಿ ಶ್ರೀವಾಣಿ ಪ್ರಹ್ಲಾದರಾವ್ ಮತ್ತು ಉಪ ಸಂಪಾದಕ ಎಚ್.ಕೆ. ರಾಘವೇಂದ್ರರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಸುರೇಶ್‌ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್ ವಂದಿಸಿದರು.
ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಸೇರಿದಂತೆ ಹಲವಾರು ಪತ್ರಕರ್ತರು ಉಪಸ್ಥಿತರಿದ್ದರು.