ಹನಿಟ್ರ್ಯಾಪ್ ಆರೋಪ ಮುಂದೆಯೂ ಬರಬಹುದು : ಸಚಿವ ಕೆ.ಎನ್.ರಾಜಣ್ಣ

ಕೆ.ಎನ್.ರಾಜಣ್ಣ
ಕೋಲಾರ : ಹನಿಟ್ರ್ಯಾಪ್ ಆರೋಪ ಮುಂದೆಯೂ ಬರಬಹುದು ಎಂದು ಕೋಲಾರದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಇಂದು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಕುರಿತು ವಿಧಾನಸಭೆಯಲ್ಲಿ ಹೇಳುವಷ್ಟು ಹೇಳಿದ್ದೇನೆ, ಅದನ್ನು ಹೊರತು ಪಡಿಸಿ ಹೇಳಲು ಏನು ಇಲ್ಲ, ಈ ಆರೋಪ ಒಂದಲ್ಲ, ಕಡೆಯದು ಅಲ್ಲ, ಮುಂದೆಯೂ ಬರಬಹುದು. ಹನಿಟ್ರ್ಯಾಪ್ ತನಿಖೆ ಕುರಿತು ಸಿಎಂ ಹಾಗೂ ಗೃಹಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.
ಶಾಸಕರ ಅಮಾನತ್ತು ವಿಷಯದ ಕುರಿತು ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಂದು ಕಪ್ಪು ಚುಕ್ಕೆ, ಜನಪರ ವಿಚಾರವನ್ನಿಟ್ಟುಕೊಂಡು ಶಾಸಕರು ಚರ್ಚೆ ಮಾಡುತ್ತಿಲ್ಲ, ಬಜೆಟ್ ಬಗ್ಗೆ 80 ಶಾಸಕರು ಪ್ರಸ್ತಾಪ ಮಾಡಿದ್ದಾರೆ, ಅದಕ್ಕೆ ಸಿಎಂ ಉತ್ತರ ಕೊಡಬೇಕಾಗಿದೆ, ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ಅಡಚಣೆ ಮಾಡಲು ಈ ರೀತಿ ಮಾಡಿದ್ದಾರೆ ಎಂದರು.
ನಾನು ಸ್ಪೀಕರ್ ಆಗಿದ್ದರೆ ಮೊದಲೇ ಅಮಾನತ್ತು ಮಾಡುತ್ತಿದೆ, ರಾಜ್ಯದಲ್ಲಿ 5 ವರ್ಷ ಸರ್ಕಾರ ಅವಧಿ ಪೂರೈಕೆ ಮಾಡುತ್ತೆ. ಸಿಎಂ ಸಿದ್ದರಾಮಯ್ಯ 5 ವರ್ಷ ಇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಹೇಳಿದರು.
ಕರ್ನಾಟಕ ಬಂದ್ ಕುರಿತು ಪ್ರತಿಕ್ರಿಯಿಸಿ, ಬೆಂಗಳೂರು ಬಂದ್ ಮಾಡಿದರೆ ಬೆಳಗಾವಿ ಕನ್ನಡಿಗರಿಗೆ ರಕ್ಷಣೆ ಸಿಗುತ್ತಾ? ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿ ಎಂದರು.