ಕೋಲಾರ ಲೋಕಸಭಾ ಕ್ಷೇತ್ರ | 18 ಮಂದಿ ಕಣದಲ್ಲಿ : 1 ನಾಮಪತ್ರ ವಾಪಸ್
ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಲಾಗಿದ್ದ ನಾಮಪತ್ರಗಳನ್ನು ವಾಪಸ್ ಪಡೆಯಲು ಎ.8 ಕಡೆಯ ದಿನವಾಗಿತ್ತು. ನಾಮಪತ್ರಗಳ ಪರಿಶೀಲನೆಯ ನಂತರ 19 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದೆ. ಸೋಮವಾರ ಪಕ್ಷೇತರ ಅಭ್ಯರ್ಥಿ ಎಂ. ಚಂದ್ರಶೇಖರ್ ವಾಪಸ್ ಪಡೆದಿದ್ದರಿಂದ ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು ಉಳಿದಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ
ಅಂತಿಮ ಕಣದಲ್ಲಿ ಉಳಿದಿರುವ 18 ಮಂದಿ ಅಭ್ಯರ್ಥಿಗಳು: ಕೆ.ವಿ. ಗೌತಮ್ ಕಾಂಗ್ರೆಸ್, ಎಂ. ಮಲ್ಲೇಶ್ ಬಾಬು ಜನತಾದಳ (ಜಾತ್ಯಾತೀತ), ಸುರೇಶ್. ಎಸ್.ಬಿ ಬಹುಜನ ಸಮಾಜ ಪಕ್ಷ, ಡಿ. ಗೋಪಾಲಕೃಷ್ಣ ಸೊಷಿಯಲಿಸ್ಟ್ ಪಾರ್ಟಿ (ಐ), ತಿಮ್ಮರಾಯಪ್ಪ ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ- (ಕರ್ನಾಟಕ ಪಕ್ಷ), ದೇವರಾಜ ಎ. ಉತ್ತಮ ಪ್ರಜಾಕೀಯ ಪಾರ್ಟಿ, ಕೆ.ಆರ್. ದೇವರಾಜ ದಿಲ್ಲಿ ಜನತಾ ಪಾರ್ಟಿ, ಮಹೇಶ್. ಎ.ವಿ ಕರ್ನಾಟಕ ರಾಷ್ಟ್ರ ಸಮಿತಿ, ಎಂ.ಸಿ ಹಳ್ಳಿ ವೇಣು ವಿಡುತಲೈ ಚಿರೈತಗಲ್ ಕಚ್ಚಿ. ಕೃಷ್ಣಯ್ಯ ಎನ್. ಪಕ್ಷೇತರರು, ಎಸ್.ಎನ್ ನಾರಾಯಣಸ್ವಾಮಿ. ವಿ. ಪಕ್ಷೇತರರು, ಎಂ.ಎಸ್. ಬದರಿನಾರಾಯಣ ಪಕ್ಷೇತರರು, ಎಂ. ಮುನಿಗಂಗಪ್ಪ ಪಕ್ಷೇತರರು, ಆರ್. ರಾಜೇಂದ್ರ ಪಕ್ಷೇತರರು, ಆರ್. ರಂಜಿತ್ ಕುಮಾರ್ ಪಕ್ಷೇತರರು, ಡಾ. ಎಂ. ವೆಂಕಟಸ್ವಾಮಿ ಪಕ್ಷೇತರರು, ಹೋಳೂರು ಶ್ರೀನಿವಾಸ ಪಕ್ಷೇತರರು, ಸುಮನ್ ಎಚ್.ಎನ್ ಪಕ್ಷೇತರರು ಕಣದಲ್ಲಿ ಉಳಿದಿದ್ದಾರೆ.