ಕೋಲಾರ: ಎರಡು ತಲೆಯ ಕರುವಿಗೆ ಜನ್ಮ ನೀಡಿದ ಹಸು

ಕೋಲಾರ: ಕೋಲಾರದಲ್ಲಿ ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದೆ. ಸದ್ಯ ಈ ಕರು ಆಕರ್ಷಿಣೀಯ ಕೇಂದ್ರ ಬಿಂದುವಾಗಿದೆ.
ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿಯ ಕರುವನ್ನು ನೋಡಲು ತಂಡೋಪ ತಂಡವಾಗಿ ಜನರು ಹರಿದು ಬರುತ್ತಿದ್ದಾರೆ. ಈ ಅಪರೂಪದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಹೋಬಳಿಯ ರಾಮಸಂದ್ರ ಗ್ರಾಮದಲ್ಲಿ ನಡೆದಿದೆ.
ಈ ಹಸು ರಾಮಸಂದ್ರ ಗ್ರಾಮದ ಯಲ್ಲಪ್ಪ ಎಂಬ ರೈತನಿಗೆ ಸೇರಿದ್ದು, ಹಸು ಹಾಗೂ ಕರು ಆರೋಗ್ಯವಾಗಿದೆ.
Next Story