ಕೊಪ್ಪಳ | ಟ್ರ್ಯಾಕ್ಟರ್ ಪಲ್ಟಿಯಾಗಿ 30ಕ್ಕೂ ಅಧಿಕ ಮಂದಿಗೆ ಗಾಯ
ಕೊಪ್ಪಳ/ಕಾರಟಗಿ : ನವರಾತ್ರಿಯ ಕೊನೆಯ ದಿನ ದೇವಿಯ ದರ್ಶನ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ 30ಕ್ಕೂ ಅಧಿಕ ಜನರಿದ್ದ ಟ್ರ್ಯಾಕ್ಟರ್ ವೊಂದು ಪಲ್ಟಿಯಾಗಿ, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ಇಲ್ಲಿನ ದೇವಿಕ್ಯಾಂಪ್‌ನ ದೇವಿಗುಡ್ಡದಲ್ಲಿ ನಡೆದಿದೆ.
ಗಾಯಗೊಂಡವರನ್ನು ತಾಲೂಕಿನ ಜಾಲಿಹಾಳ-ಜಂಬುನಾಥನಹಳ್ಳಿಯ ಜನರೆಂದು ತಿಳಿದುಬಂದಿದ್ದು, ಟ್ರ್ಯಾಕ್ಟರ್ ನಲ್ಲಿ ಬಹುತೇಕ ಮಕ್ಕಳೇ ತುಂಬಿದ್ದರು ಎನ್ನಲಾಗಿದೆ. ಸಣ್ಣಪುಟ್ಟ ಗಾಯಗಳಾದವರಿಗೆ ಕಾರಟಗಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗಂಭೀರ ಗಾಯಗೊಂಡ ಜನರನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂವರಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಗಂಗಾವತಿಗೆ ಕಳುಹಿಸಲಾಗಿದೆ. ಬಹುತೇಕರು ಮನೆಗೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story