ಗಂಗಾವತಿ | ಕಾಲುವೆಗೆ ಬಿದ್ದು ಬೈಕ್ ಸವಾರ ಮೃತ್ಯು
ಗಂಗಾವತಿ : ವಿಜಯನಗರ ಕಾಲುವೆಗೆ ಬಿದ್ದು ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಸಾಣಾಪೂರ-ವಿರೂಪಾಪೂರಗಡ್ಡಿ ಬಳಿ ರಾಜ್ಯ ಹೆದ್ದಾರಿ 130ರಲ್ಲಿ ನಡೆದಿದೆ.
ತಾಲೂಕಿನ ಸಾನಾಪುರ ವಿರುಪಾಪುರ ಗಡಿ ಮಧ್ಯೆ ಕಳೆದ ವರ್ಷ ಪುರಾತನ ವಿಜಯನಗರ ಕಾಲುವೆ, ದುರಸ್ತಿ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ 130 ಹೊಂದಿಕೊಂಡಂತೆ ನಿರ್ಮಿಸಿರುವ ಕಾಲುವೆಯ ಚಿಕ್ಕ ತಡೆಗೋಡೆ ತಿರುವಿನಲ್ಲಿ ಪದೇ ಪದೇ ಬೈಕ್ ಹಾಗೂ ಇತರೆ ವಾಹನಗಳ ಅಪಘಾತಗಳು ಸಂಭವಿಸಿ ಹಲವಾರು ಮಂದಿ ಕಾಲುವೆಯ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಡಿ.18ರ ಬುಧವಾರ ಬೈಕ್ ಸವಾರನೊಬ್ಬ ಆಯತಪ್ಪಿ ಕಾಲುವೆಗೆ ಬಿದ್ದಿದ್ದು, ಬೈಕ್ ಕಾಲುವೆ ದಂಡೆಯ ಮೇಲಿದೆ. ಸವಾರ ಬೈಕ್ ನ್ನು ಕಾಲುವೆಗೆ ಹಾರಿಸಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Next Story