ಕೊಪ್ಪಳ: ಹೊಲಕ್ಕೆ ತೆರಳಿದ್ದ ಇಬ್ಬರು ಸಿಡಿಲು ಬಡಿದು ಮೃತ್ಯು

ಕೊಪ್ಪಳ: ನಗರದ ಹಲವೆಡೆ ಗುಡುಗು ಸಹಿತ ಮಳೆಗೆಯಾಗಿದ್ದು, ಕೆಲಸದ ನಿಮಿತ್ತ ಹೊಲಕ್ಕೆ ತೆರಳಿದ್ದ ಇಬ್ಬರು ಸಿಡಿಲುಬಡಿದು ಮೃತಪಟ್ಟ ಘಟನೆ ಗರುವಾರ ಸಿಂದೋಗಿಯಲ್ಲಿ ನಡೆದಿದೆ.
ಕೊಪ್ಪಳದ ಗೌರಿಅಂಗಳದ ನಿವಾಸಿಗಳಾದ ಮಂಜುನಾಥ್ ರಾಮಲಿಂಗಪ್ಪ ಗಾಳಿ (48),ಗೋವಿಂದಪ್ಪ ಮ್ಯಾಗಲಮನಿ (62) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮಳೆ ಬಂದಿರುವುದರಿಂದ ಹೊಲದಲ್ಲಿ ಇರುವ ಮನೆಯೊಳಗೆ ಹೋಗಿ ಕಿಟಕಿ ಬಳಿ ನಿಂತಿದ್ದರು. ಆ ಸಂರ್ಭದಲ್ಲಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಮೃತಪಟಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು,ಮಳೆಗೆ ಭತ್ತ, ಗದ್ದೆಗಳು ಹಾನಿಗೀಡಾಗಿವೆ.
Next Story