ಕೊಪ್ಪಳ: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣಾ ಸಮಾರಂಭ
ಕೊಪ್ಪಳ: "ನಾವು ಕಲಿಯುವ ವಿದ್ಯೆಯು ನಮ್ಮನ್ನು ನಾವು ಯಾರು ನನ್ನ ದೇವರು ಯಾರು ಮತ್ತು ನನ್ನ ಬದುಕಿನ ಉದ್ದೇಶವೇನು ಎಂಬ ವಾಸ್ತವವನ್ನು ನಮ್ಮ ಮುಂದೆ ತೆರೆದಿಡಬೇಕು" ಎಂದು ಬಿ ಐ ಇ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ, ಹೇಳಿದರು.
ಅವರು ಇತ್ತೀಚಿಗೆ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕೊಪ್ಪಳ ವತಿಯಿಂದ ಸ್ಥಳೀಯ ಅಆಲಾ ಮಸೀದಿಯ ಸಭಾಂಗಣದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದರು.
ಜ.ಇ.ಹಿಂದ್ ರಾಯಚೂರು ವಲಯ ಸಂಚಾಲಕ ಮೌಲಾನಾ ಅನ್ವರ್ ಪಾಷಾ ಮಾತನಾಡಿ "ನಮ್ಮ ಮಕ್ಕಳನ್ನು ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸಲು ಪ್ರಯತ್ನಿಸಬೇಕು ಧಾರ್ಮಿಕ ಶಿಕ್ಷಣವು ನಿಮ್ಮನ್ನು ಒಬ್ಬ ಒಳ್ಳೆಯ ಮನುಷ್ಯರನ್ನಾಗಿ ಪರಿವರ್ತಿಸುತ್ತದೆ" ಎಂದು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಕನೂರು ಇದರ ವೈಸ್ ಪ್ರಿನ್ಸಿಪಾಲ್ ಶೇಖ್ ಮಹಬೂಬ್ ಮಾತನಾಡಿ, ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಸ್ಥಾನೀಯ ಸಂಚಾಲಕ ಅಸ್ಗರ್ ಅಲಿ ಪ್ರಸ್ತಾವಿಕ ಭಾಷಣ ಮಾಡಿದರು.
ಜ.ಇ. ಹಿಂದ್ ಸ್ಥಾನೀಯ ಅಧ್ಯಕ್ಷ ಸಯ್ಯದ್ ಹಿದಾಯತ್ ಅಲಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.