ಕೊಪ್ಪಳ | ಎರಡು ವಾಹನಗಳು ಮುಖಾಮುಖಿ ಢಿಕ್ಕಿ : ಇಬ್ಬರು ಸಜೀವ ದಹನ

ಸಿದ್ದಪ್ಪ ಛತ್ರಪ್ಪ,ಅಂಜನಪ್ಪ ಸೋಮಪ್ಪ
ತಾವರಗೇರಾ /ಕೊಪ್ಪಳ : ಕುಷ್ಟಗಿ ತಾಲ್ಲೂಕಿನ ತಾವರಗೇರಾ ಸಮೀಪದ ನಂದಾಪೂರ ಕ್ರಾಸ್ ಹತ್ತಿರ ಎರಡು ವಾಹನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಗುರುವಾರ ಬೆಳಗಿನ ಜಾವ ಲಾರಿ ಮತ್ತು ಸರಕು ಸಾಗಣೆ ವಾಹನಗಳ ನಡುವೆ ಅವಘಡ ನಡೆದಿದ್ದು, ವಾಹನಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಟ್ರಕ್ಗೆ ಬೆಂಕಿ ಹೊತ್ತಿಕೊಂಡಿದ್ದು, ಟ್ರಕ್ ನಲಿದ್ದ ಸಿದ್ದಪ್ಪ ಛತ್ರಪ್ಪ ಪೊಲೀಸ್ ಪಾಟೀಲ್ (25) ಹಾಗೂ ಅಂಜನಪ್ಪ ಸೋಮಪ್ಪ ಪೊಲೀಸ್ ಪಾಟೀಲ್ (30) ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಪಟ್ಟವರು ಲಿಂಗಸಗೂರು ತಾಲ್ಲೂಕಿನ ತೊಡಕಿ ಗ್ರಾಮದವರು ಎಂದು ತಿಳಿದು ಬಂದಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.
ಈ ಕುರಿತು ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ ಹಾಗೂ ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
►https://whatsapp.com/channel/0029VaA8ju86LwHn9OQpEq28