ಕುಷ್ಟಗಿ | ಸಾಲಬಾಧೆ: ನ್ಯಾಯಬೆಲೆ ಅಂಗಡಿಯ ವಿತರಕ ಆತ್ಮ ಹತ್ಯೆ

ಕೊಪ್ಪಳ: ಸಾಲಗಾರ ಕಾಟ ತಡೆಯಲಾಗದೆ ನ್ಯಾಯಬೆಲೆ ಅಂಗಡಿಯ ವಿತರಕನೋರ್ವ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ಸೋಮವಾರ ತಡ ರಾತ್ರಿ ನಡೆದಿರುವುದು ವರದಿಯಾಗಿದೆ.
ಬೆನಕನಾಳ ಗ್ರಾಮದ ನ್ಯಾಯಬೆಲೆ ಅಂಗಡಿಯ ವಿತರಕ ಯಂಕಪ್ಪ(38] ಮೃತಪಟ್ಟವರು.
ಮೃತ ಯಂಕಪ್ಪ ವಿಕಲಚೇತನರಾಗಿದ್ದು, ಸರಕಾರಿ, ಖಾಸಗಿ ಹಾಗೂ ಫೈನಾನ್ಸ್ ಗಳಿಂದ ಅಂದಾಜು 20 ಲಕ್ಷ ರೂ. ವರೆಗೆ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ,
ಸಾಲ ಮರು ಪಾವತಿ ಮಾಡಲಾಗದೆ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಯಂಕಪ್ಪರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.
Next Story