ಕನಕಗಿರಿ | ನೆವಣಿ, ತೊಗರಿ ಬಣವೆಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

ಕನಕಗಿರಿ: ಹೊಲದಲ್ಲಿ ರಾಶಿ ಹಾಕಿದ್ದ ಭತ್ತದ ಹುಲ್ಲು, ನೆವಣಿ, ತೊಗರಿ ಬಣವಿಗಳಿಗೆ ಬೆಂಕಿ ಹತ್ತಿದ್ದ ಘಟನೆ ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆನಕನಾಳ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಇಲ್ಲಿನ ರೈತ ರಮೇಶ ಎಂಬವರಿಗೆ ತಲಾ ಒಂದು ಟ್ರ್ಯಾಕ್ಟರ್ ಭತ್ತದ ಹುಲ್ಲು, ತೊಗರಿ ಹೊಟ್ಟು ಹಾಗೂ ಮೂರು ಟ್ಯ್ರಾಕ್ಟರ್ ನವಣೆಯ ಸೊಪ್ಪು ಬೆಂಕಿಯಿಂದ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.
ಅಂದಾಜು 1.50 ಲಕ್ಷ ರೂಪಾಯಿ ಮೊತ್ತದಷ್ಟು ಹುಲ್ಲು ಹಾಗೂ ಸೊಪ್ಪು ನಷ್ಟವಾಗಿದೆ.
ಘಟನೆ ನಡೆದ ಸ್ಥಳಕ್ಕೆ ಗಂಗಾವತಿ ಅಗ್ನಿಶಾಮಕ ಸಿಬ್ಬಂದಿ ಫೈರ್ ಎಂಜಿನ್ ಮೂಲಕ ಬೆಂಕಿಯನ್ನು ನಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಬೋವಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
Next Story