Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಶಾಲಾ ಗ್ರಂಥಾಲಯದಲ್ಲಿರಲಿ ‘ಮಕ್ಕಳಿಗಾಗಿ...

ಶಾಲಾ ಗ್ರಂಥಾಲಯದಲ್ಲಿರಲಿ ‘ಮಕ್ಕಳಿಗಾಗಿ ಸಂವಿಧಾನ’

ವಾರ್ತಾಭಾರತಿವಾರ್ತಾಭಾರತಿ14 Oct 2023 10:45 AM IST
share
ಶಾಲಾ ಗ್ರಂಥಾಲಯದಲ್ಲಿರಲಿ ‘ಮಕ್ಕಳಿಗಾಗಿ ಸಂವಿಧಾನ’

ಅಚುಶ್ರೀ ಬಾಂಗೇರು, ಬೆಳ್ತಂಗಡಿ

ನಮ್ಮ ದೇಶದ ಸಂವಿಧಾನವನ್ನು ವಿಶ್ವವೇ ಕೊಂಡಾಡುತ್ತಿದೆ. ನಮ್ಮ ಸಂವಿಧಾನವನ್ನು ಪ್ರೇಮಿಸುತ್ತಾ ಕೊಂಡಾಡುವ ಹೆಮ್ಮೆಪಡುವ ಬಹುಸಂಖ್ಯಾತ ದೇಶಪ್ರೇಮಿಗಳ ಮಧ್ಯೆ ಅವಕಾಶ ಸಿಕ್ಕಿದಾಗಲೆಲ್ಲಾ ಸಂವಿಧಾನವೇ ಸರಿ ಇಲ್ಲ, ದೇಶದ ಕಾನೂನು ಸರಿ ಇಲ್ಲ ಎಂದೆಲ್ಲಾ ದೇಶದಲ್ಲಿ ಏನೇ ಗಂಡಾಂತರವಾದರೂ ವಿವಾದ ಉಂಟಾದರೂ ಎಲ್ಲದಕ್ಕೂ ಸಂವಿಧಾನವನ್ನೇ ಟೀಕಿಸುವ ಕಿಡಿಗೇಡಿ ಶಕ್ತಿಗಳು ತಲೆ ಎತ್ತುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಆತಂಕಕಾರಿ ಬೆಳವಣಿಗೆಗಳನ್ನು ಕಾಣುವಾಗ ನಮ್ಮ ಸಂವಿಧಾನಕ್ಕೆ ಶತ್ರು ದೇಶಗಳಿಂದ ಯಾವ ಗಂಡಾಂತರವೂ ಇಲ್ಲ; ಆದರೆ ಯಾವ ಆಂತರಿಕ ಕಂಟಕ ಕಾದಿದೆಯೋ ಎನ್ನುವಷ್ಟರ ಮಟ್ಟಿಗೆ ಸಂವಿಧಾನ ವಿರೋಧಿಗಳು, ದೇಶದಲ್ಲಾಗುತ್ತಿರುವ ಎಲ್ಲಾ ಅನಾಹುತಗಳಿಗೂ ಸಂವಿಧಾನದ ಬಗ್ಗೆ ಅಸಹನೆ ತೋರುವ, ಟೀಕಿಸುವ, ನಿಂದಿಸುವ ಜನರು ಸಂವಿಧಾನ ಜಾರಿಯಾಗುವ ಜಾಗಗಳಲ್ಲೇ ಹುಟ್ಟಿಕೊಳ್ಳುತ್ತಿದ್ದಾರೆ ಎಂಬ ಕಹಿ ಸತ್ಯವನ್ನು ಮರೆಮಾಚದೆ ಒಪ್ಪಿಕೊಳ್ಳಬೇಕಾಗಿದೆ.

ಇಂತಹ ಸಂವಿಧಾನ ವಿರೋಧಿ ಮನಸ್ಥಿತಿಗಳ ಸುತ್ತಮುತ್ತ ಮತ್ತು ಯುವ ಪೀಳಿಗೆಯನ್ನು ದಿಕ್ಕೆಡಿಸುವ ಪ್ರಯತ್ನಗಳ ನಡುವೆ ದೇಶವನ್ನು, ನಮ್ಮನ್ನು ಮುನ್ನಡೆಸಬೇಕಾದ ಸಂವಿಧಾನವನ್ನು ಮುಂದಿನ ಪೀಳಿಗೆಗಾಗಿ ಕಾಪಿಟ್ಟುಕೊಳ್ಳಬೇಕಾದ ತುರ್ತು ಇದೆ ಎಂಬುದನ್ನು ಗಂಭೀರವಾಗಿ ಚಿಂತಿಸಿ ಸಂಭಾವ್ಯ ಗಂಡಾಂತರಗಳ ಬಗ್ಗೆ ಆಗಾಗ ಆತಂಕ ವ್ಯಕ್ತಪಡಿಸುತ್ತಿರುವ ಸಂವಿಧಾನ ತಜ್ಞರು ಈ ಕುರಿತು ನಾನಾ ಜಾಗೃತಿ ಕಾರ್ಯಕ್ರಮಗಳನ್ನೂ ಒಂದು ಆಂದೋಲನೋಪಾದಿಯಲ್ಲಿ ಕೈಗೊಂಡಿರುವುದು ಮತ್ತು ಈ ಕಾರ್ಯದಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

2018ರಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನದಾಸ್‌ರವರ ‘ಸಂವಿಧಾನ ಓದು’ ಎಂಬ ಕೈಪಿಡಿಯೊಂದು ವಿದ್ಯಾರ್ಥಿ ಯುವಜನರಿಗಾಗಿ ‘ಸಹಯಾನ’ ಪ್ರಕಾಶನದ ಮೂಲಕ ಹೊರಬಂದಿತ್ತು. ರಾಜ್ಯಾದ್ಯಂತ ‘‘ವಿದ್ಯಾರ್ಥಿಯೆಡೆ ಸಂವಿಧಾನ ನಡೆ’’ ಎಂಬ ಮಹತ್ವದ ಅಭಿಯಾನವನ್ನು ನಡೆಸುವ ಆಶಯದೊಂದಿಗೆ ಹೊರ ತರಲಾದ ಈ ‘ಸಂವಿಧಾನ ಓದು’ ಕಿರು ಕೃತಿಯು ಮೊದಲ ಮುದ್ರಣ ಕಂಡ ಒಂದೇ ತಿಂಗಳಲ್ಲಿ ಹತ್ತನೇ ಮುದ್ರಣವನ್ನು ದಾಟಿತ್ತು. ಇದು ಆ ಕೃತಿಯ ಮಹತ್ವವನ್ನು ಮತ್ತು ಸಾರ್ಥಕತೆಯನ್ನು ಸೂಚಿಸುತ್ತದೆ. 2020ರಲ್ಲಿ ‘ಸಂವಿಧಾನ ಓದು-25 ಪ್ರಶ್ನೆ ಉತ್ತರ’ ಎಂಬ ಮತ್ತೊಂದು ಕೈಪಿಡಿಯು ‘ಸಹಯಾನ’ ಪ್ರಕಾಶನದ ಮೂಲಕ ಹೊರ ಬಂತು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಮಾಜವಾದಿ ಮತ್ತು ಜಾತ್ಯತೀತ ಭಾವನೆಗಳನ್ನು ಜನಸಾಮಾನ್ಯರಲ್ಲಿ ವಿಶೇಷವಾಗಿ ದೇಶದ ಭವಿಷ್ಯವನ್ನು ಕಟ್ಟುವ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಯುವಜನರಿಗೆ ಸರಳವಾಗಿ ಸಂವಿಧಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯ್ದ ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಕಳೆದ ಐದು ವರ್ಷಗಳಿಂದ ಸಂವಿಧಾನ ಅಭಿಯಾನ ಆಯೋಜಿಸಲಾಗುತ್ತಿದೆ.

ಇದೀಗ ರಾಜ್ಯ ಸರಕಾರವು ವಿಶ್ವ ಪ್ರಜಾಪ್ರಭುತ್ವ ದಿನದ ಸವಿ ನೆನಪಿನಲ್ಲಿ ಶಾಲಾ ಕಾಲೇಜುಗಳಲ್ಲಿ ಭಾರತೀಯ ಸಂವಿಧಾನದ ಪೀಠಿಕೆ ಪಠಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ವಿಶೇಷವಾಗಿ ವಿದ್ಯಾರ್ಥಿ ಯುವಜನರಲ್ಲಿ ಪ್ರಸ್ತಾವನೆಯ ಮೂಲಕ ಸಂವಿಧಾನದ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ ಹೊತ್ತಿನಲ್ಲಿ ಇದೇ ಆಶಯದೊಂದಿಗೆ ಬಂದ ಪುಸ್ತಕಗಳ ಸಾಲಿನಲ್ಲಿ ದಿಲ್ಲಿ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶರಾದ ಹಾಗೂ ರಾಜ್ಯದ ಪ್ರಥಮ ಮುಖ್ಯ ನ್ಯಾಯಾಧೀಶರೂ ಆದ ಜಸ್ಟಿಸ್ ಲೀಲಾ ಸೇಟ್ ಅವರು ಮಕ್ಕಳಿಗಾಗಿ ಬರೆದ ‘ವಿ ದ ಚಿಲ್ಡ್ರನ್ ಆಫ್ ಇಂಡಿಯಾ’ ಎಂಬ ಪುಸ್ತಕದ ಸ್ಫೂರ್ತಿಯಿಂದ ಲೇಖಕಿ ವಾಣಿ ಪೆರಿಯೋಡಿ ಅವರು ‘ಮಕ್ಕಳಿಗಾಗಿ ಸಂವಿಧಾನ’ ಎಂಬ ಮಕ್ಕಳ ಮನಮುಟ್ಟುವ ಪುಸ್ತಕವೊಂದನ್ನು ಮಕ್ಕಳ ಮೇಲಿನ ಕಾಳಜಿಯಿಂದ ಬರೆದು ‘ಲಡಾಯಿ’ ಪ್ರಕಾಶನದ ಮೂಲಕ ಹೊರ ತಂದಿದ್ದಾರೆ.

‘ಮಕ್ಕಳಿಗಾಗಿ ಸಂವಿಧಾನ’ ಕೃತಿಯ ಪರಿವಿಡಿಯೇ ಪರಿಣಾಮವನ್ನು ಹೇಳುವಷ್ಟರ ಮಟ್ಟಿಗೆ ಸೂಕ್ಷ್ಮವಾಗಿ, ಎಚ್ಚರವಾಗಿ, ಅಷ್ಟೇ ಆಪ್ತವಾಗಿ, ಸರಳವಾಗಿ ಸಂವಿಧಾನದ ಮಹತ್ವದ ವಿಷಯಗಳನ್ನು 22 ಭಾಗಗಳಾಗಿ ವಿಂಗಡಿಸಿ ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಲಾಗಿದೆ.

‘ಮಕ್ಕಳಿಗಾಗಿ ಸಂವಿಧಾನ’ ಪುಸ್ತಕದಲ್ಲಿ ಲೇಖಕಿ ವಾಣಿ ಪೆರಿಯೋಡಿ ಅವರು ‘ಸಂವಿಧಾನ ಎಂದರೇನು?’ ಎನ್ನುವ ಪ್ರಾಥಮಿಕ ಪ್ರಶ್ನೆಯಿಂದ ಆರಂಭಿಸಿ ಭಾರತದ ಸಂವಿಧಾನದ ಜೀವಾಳವೇ ಆಗಿರುವ ನಮ್ಮ ಲಾಂಛನ, ಭಾರತದ ಪ್ರಜೆಗಳಾದ ನಾವು, ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯ, ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಹಕ್ಕು, ಕರ್ತವ್ಯ ಮತ್ತು ರಾಜ್ಯ ನಿರ್ದೇಶಕ ತತ್ವಗಳು ಎಂಬಿತ್ಯಾದಿ ಒಟ್ಟು ಸಾಂವಿಧಾನಿಕ ಆಶಯಗಳನ್ನು ಮಕ್ಕಳ ಮನಸ್ಸೆಂಬ ಬಿಳಿ ಹಾಳೆಯಲ್ಲಿ ಪರಿಣಾಮಕಾರಿಯಾಗಿ ಬಿತ್ತಲು ಮಕ್ಕಳ ನಡುವಿನ ಗುಂಪು ಸಂಭಾಷಣೆ ಮಾದರಿಯಲ್ಲಿ, ಪ್ರಶ್ನೋತ್ತರ ಶೈಲಿಯಲ್ಲಿ ಮಕ್ಕಳಿಗೆ ಸರಳ ಭಾಷೆಯಲ್ಲಿ ಮನದಟ್ಟು ಮಾಡುವ ಪ್ರಯತ್ನವು ಮಕ್ಕಳನ್ನು ಆಪ್ತವಾಗಿ ಸೆಳೆಯುವಲ್ಲಿ ಯಶಸ್ವಿಯಾಗುವಂತಿದೆ. ಗಟ್ಟಿಯಾದ ಮಹಿಳಾಪರ ಧ್ವನಿಯಾಗಿದ್ದೂ ಸದಾ ಜನಪರ ಚಟುವಟಿಕೆಗಳಲ್ಲಿ ನಾಡಿನಾದ್ಯಂತ ಓಡಾಡುವ ವಾಣಿ ಪೆರಿಯೋಡಿ ಮಕ್ಕಳಿಗಾಗಿ ಮಕ್ಕಳತನವನ್ನು ಇಂದಿಗೂ ಜೋಪಾನವಾಗಿ ಕಟ್ಟಿಕೊಂಡವರಾಗಿ ಮಕ್ಕಳ ವಯೋಸಹಜ ಸೃಜನಶೀಲತೆ, ಕ್ರಿಯಾತ್ಮಕ ಚಟುವಟಿಕೆಗಳ ಸುತ್ತ ನಿರಂತರ ಕಾರ್ಯಾಗಾರ, ಮಾಹಿತಿ, ತರಬೇತಿ, ಕಮ್ಮಟ ಮುಂತಾದ ಕಾರ್ಯಕ್ರಮಗಳ ಸಂಘಟಕಿಯೂ ಹೌದು. ಇದೇ ಕಾರಣಕ್ಕಾಗಿ ಈ ಪುಸ್ತಕ ಮಕ್ಕಳ ಮನಸ್ಸುಗಳನ್ನು ಆಪ್ತವಾಗಿ ಗೆಲ್ಲಬಹುದು. ಈ ನಿಟ್ಟಿನಲ್ಲಿ ‘ಮಕ್ಕಳಿಗಾಗಿ ಸಂವಿಧಾನ’ವು ಶಾಲಾ-ಕಾಲೇಜುಗಳ ಗ್ರಂಥಾಲಯಗಳಲ್ಲಿ ಇರಬೇಕಾದ ಮಹತ್ವದ ಆಶಯದ ಸಣ್ಣ ಪುಸ್ತಕವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X